ಚುನಾವಣೆಗಳು ಸಮಾಜದ ಕನ್ನಡಿ, ಸಮಾಜ ಒಡೆಯುವ ಸಾಧನವಾಗಬಾರದು: ಪ್ರಿಯಾಂಕ್ ಖರ್ಗೆ

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನನಗೆ ತುಂಬಾ ಇಷ್ಟವಾಗಿತ್ತು. ಆದರೆ ನನ್ನ ಖಾತೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗಿಲ್ಲ, ..
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on
ಪ್ರ: ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಜೊತೆ ಕೆಲಸ ಮಾಡುವುದಕ್ಕೆ ವ್ಯತ್ಯಾಸ ಇದೆಯೇ?
ಪ್ರಸಕ್ತ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಅವರ ಜೊತೆ ನಾನು ಹೆಚ್ಚಾಗಿ ಸಂಪರ್ಕದಲ್ಲಿಲ್ಲ, ಯಾವುದೇ ಸಾಮಾನ್ಯ ವಿಷಯ ಪ್ರಸ್ತಾಪಿಸಿದಾಗ ಅವರು ಇಲ್ಲ ಎನ್ನುವುದಿಲ್ಲ. ರಾಜಕೀಯವಾಗಿ ಸಿದ್ದರಾಮಯ್ಯ ಅವರ ಶೈಲಿಯೇ ತೀರಾ ವಿಭಿನ್ನ, ವಿಷಯ ಸಂಪೂರ್ಣ ತಿಳಿಯುವುದಕ್ಕೆ ಮುನ್ನವೇ ಅದಕ್ಕೆ ಪರಿಹಾರ ಹುಡುಕುತ್ತಿರುತ್ತಾರೆ.
ಪ್ರ: ನೀವು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ?
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ನನಗೆ ತುಂಬಾ ಇಷ್ಟವಾಗಿತ್ತು. ಆದರೆ ನನ್ನ ಖಾತೆಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗಿಲ್ಲ, ನನಗೆ ತುಂಬಾ ಬೆಂಬಲ ಹಾಗೂ ಪ್ರೋತ್ಸಾಹ ಸಿಗುತ್ತಿದೆ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಅತಿ ದೊಡ್ಡ ಜವಾಬ್ದಾರಿಯಾಗಿದೆ, ನನ್ನ ಹಿಂದಿನ ಖಾತೆ ಮಿಸ್ ಮಾಡಿಕೊಳ್ಳಲು ನನಗೆ ಸಮಯವಿಲ್ಲ,
ಸಮ್ಮಿಶ್ರ ಸರ್ಕಾರ ಹೇಗೆ ನಡೆಯುತ್ತಿದೆ?
ಸಮ್ಮಿಶ್ರ ಸರ್ಕಾರಕ್ಕೆ ಹಲವು ಸವಾಲುಗಳಿವೆ, ಸಚಿವರುಗಳಿಗೆ ಅವರಿಗೆ ಬೇಕಾದ ಸ್ವಾತಂತ್ರ್ಯ ಇದೆ, ಸರ್ಕಾರ ಸುಗಮವಾಗಿ ನಡೆಯಲು ಯಾವುದೇ ಅಡಚಣೆಗಳಿಲ್ಲ, ಆದರೆ ಕೆಲವು ನಿರ್ಬಂಧಗಳಿವೆ. ಆದರೆ ಕಳೆದ ಕೆಲವು ತಿಂಗಳಿಂದ ಅವೆಲ್ಲಾವನ್ನು ಮೀರಿ ನಾವು ಕೆಲಸ ಮಾಡುತ್ತಿದ್ದೇವೆ, 
ಪ್ರ: ನೀವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ?
ನಾನು 2ನೇ ಬಾರಿ ಶಾಸಕನಾಗಿದ್ದೇನೆ,  ಇಡೀ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಅತಿ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ,ಆಸೆ ಮತ್ತು ಆಕಾಂಕ್ಷೆ ಎರಡು ಓಕೆ, ಆದರೆ ಅದಕ್ಕೆ ಇದು ಸರಿಯಾದ ಸಮಯವಲ್ಲ, 
ಪ್ರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ನ ಎಷ್ಟು ಮಂದಿ ಸದಸ್ಯರು ಆಯ್ಕೆಯಾಗಲಿದ್ದಾರೆ?
ಸುಮಾರು 15 ರಿಂದ 18ಸೀಟು ಗೆಲ್ಲಲಿದ್ದೇವೆ, ಅನಂತ್ ಕುಮಾರ್ ಅವರ ನಿಧನದಿಂದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ನಮಗೆ ಅವಕಾಶಗಳಿವೆ. ಆದರೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಾವು ವೋಟಿಂಗ್ ರೀತಿಯನ್ನು ಬದಲಾಯಿಸಲು ಸಾಧ್ಯವಿಲ್ಲ,
ಪ್ರ: ಯಾಕೆ ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿಲ್ಲ,?
ಯಾರ್ಯಾರು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೋ ಆವಾಗ ಬೆಳಕಿಗೆ ಬರುತ್ತದೆ, ಅದನ್ನು ಕೇವಲ ಒಬ್ಬರು ತೊಳೆದು ಹಾಕಲು ಸಾಧ್ಯವಿಲ್ಲ, ಆದರೆ ಪಾರದರ್ಶಕ ಆಡಳಿತ ಸ್ವಲ್ಪ ಮಟ್ಟಿನ ಭ್ರಷ್ಟಾಚಾರ ಕಡಿಮೆ ಮಾಡಿದೆ.ಸಿಎಂ ಹಾಗೂ ಡಿಸಿಎಂ ಒಬ್ಬೊಬ್ಬರೇ, ಆದರೆ ಪ್ರತಿಯೊಂದು ಇಲಾಖೆಗೂ ಒಬ್ಬರೊಬ್ಬರು ಮುಖ್ಯಸ್ಥರಿದ್ದಾರೆ, ಆದರೇ ವರ್ಗಾವಣೆ ವಿಚಾರದಲ್ಲಿ ಕೆಲವು ಸಂಘರ್ಷಗಳಿವೆ ಆದರೆ ನನ್ನ ಇಲಾಖೆಯಲ್ಲಿ ಪಾರದರ್ಶಕವಾಗಿ ವರ್ಗಾವಣೆ ಕಾರ್ಯ ಪೂರ್ಣಗೊಂಡಿದೆ,
ಪ್ರ: ಒಂದು ವೇಳೆ ನೀವು ರಾಜಕಾರಣಿಯಾಗದಿದ್ದರೇ ಬೇರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಿರಿ?
ವೃತ್ತಿಯಲ್ಲಿ ನಾನೊಬ್ಬ ಆ್ಯನಿಮೇಟರ್, ಅದನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ನಾನು ವಕೀಲನಾಗಬೇಕು ಎಂದು ನನ್ನ ತಾಯಿ ಬಯಸಿದ್ದರು.,ನ್ಯಾಷನಲ್ ಕಾನೂನು ಕಾಲೇಜಿನಲ್ಲಿ ನಾನು ಪ್ರವೇಶ ಪರೀಕ್ಷೆ ತೆಗೆದುಕೊಂಡು ಪಾಸು ಮಾಡಿದೆ,ಆದರೆ ಅದಕ್ಕೆ ಸೇರಲಿಲ್ಲಸ ನನಗೆ ಆಸಕ್ತಿಯಿದ್ದ ಆನಿಮೇಷನ್ ವಿಷಯವನ್ನು ಆಯ್ಕೆ ಮಾಡಿಕೊಂಡೆ,
ಪ್ರ: ನಾನು ರಾಜಕಾರಣಿಯಾಗಬೇಕೆಂದು ಹೇಗೆ ನೀವು ನಿಮ್ಮ ತಂದೆ ಬಳಿ ಹೇಳಿದಿರಿ? ನಿಮಗೆ ಅವಲ ಸಲಹೆ ಏನು?
ರಾಜಕೀಯವಾಗಿ ಅವರು ನನಗೆ ಯಾವುದೇ ಸಲಹೆ ನೀಡುವುದಿಲ್ಲ, ನಾವು ರಾಜಕೀಯವಾಗಿ ಮಾತನಾಡುತ್ತೇವೆ, ಅವರು ಎಂದಿಗೂ ನಾನು ರಾಜಕೀಯಕ್ಕೆ ಬರುವಂತೆ ಹೇಳಲಿಲ್ಲ,ಆದರೆ ಅವರು ಸಿಗದಿದ್ದ ವೇಳೆ ಜನರು ನನ್ನ ಬಳಿ ತಮ್ಮ ಅರ್ಜಿ ನೀಡುತ್ತಿದ್ದರು. ಅಪ್ಪನ ಕಾರ್ಯದರ್ಶಿ ಇಲ್ಲದಿದ್ದಾಗ ನಾನು ಮೂರನೇ ಆಪ್ಷನ್ ಆಗಿರುತ್ತಿದ್ದೆ, 
ಪ್ರ: ನಿಮ್ಮ ತಂದೆಗಿಂತ ನಿಮ್ಮ ರಾಜಕೀಯ ಹೇಗೆ ವಿಭಿನ್ನ? 
ಅವರದ್ದು ಪ್ರಾಮಾಣಿಕ ರಾಜಕೀಯ, ಅವರದ್ದು ನೇರ ವ್ಯಕ್ತಿತ್ವ, ರಾಜಕೀಯವನ್ನು ಅವರು 20-20 ಕ್ರಿಕೆಟ್ ಮ್ಯಾಚ್ ನಂತೆ ನೋಡುತ್ತಾರೆ, ಅವರದ್ದು ಅಭಿವೃದ್ಧಿ ಪೂರಕ ಬೆಳವಣಿಗೆ, ನಾನು ಕೂಡ ಅದರಲ್ಲಿ ನಂಬಿಕೆ ಇಟ್ಟಿದ್ದೇನೆ, ಅದರೆ ನಮ್ಮ ಸಿದ್ದಾಂತಗಳು ಒಂದೇ.
ಪ್ರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಮಮಂದಿರ ಪ್ರಮುಖ ಅಜೆಂಡಾವಾಗುತ್ತಾ?
ಈ ಹಿಂದೆ ಬಿಜೆಪಿ ಮೊದಲು ಶೌಚಾಲಯ, ನಂತರ ದೇವಾಲಯ, ಆದರೆ ಸದ್ಯ ಇವಾಗ ಬದಲಾಗಿದೆ, ತಾವು ನೀಡಿದ್ದ ಭರವಸೆಯನ್ನು ಪ್ರಧಾನಿ ಈಡೇರಿಸಿಲ್ಲ,  ಆದರೆ ಹೇಳುವ ವಿಧಾನದಲ್ಲಿ ಎಲ್ಲವೂ ಬದಲಾಗಿದೆ. ಸರ್ಕಾರ ವಿರೋಧಿ ನೀತಿ ಕಾಂಗ್ರೆಸ್ ವರವಾಗಲಿದೆ,  ಬಿಜೆಪಿ ಸಾಮಾಜಿಕ ಮಾಧ್ಯಮಗಳಲ್ಲಿ  ವಕಲಿ ಸುದ್ದಿಗಳನ್ನು ಬಿತ್ತರಿಸುತ್ತಿದೆ., ನಮಗೆ ವಿಷಯಗಳನ್ನು ಚರ್ಚಿಸಲು ವೇದಿಕೆ ಬೇಕು, ಆದರೆ ಕೆಲವು ಮಾಧ್ಯಮಗಳು ಆತೀವವಾಗಿ ಬಿಜೆಪಿ ಪರ ಪ್ರಚಾರ ಮಾಡುತ್ತಿವೆ. 
ಪ್ರ: ಎಸ್ ಸಿ ಎಸ್ಟಿ ಸಮುದಾಯದ ಮತಗಳು ಕಡಿಮೆಯಾಗುತ್ತಿವೆ ಎನ್ನಿಸುತ್ತಿಲ್ಲವೇ?
ಭಾರತೀಯ ಸಮಾಜ ಜಾತಿ ಆಧಾರದ ಮೇಲೆ ವಿಭಜನೆಯಾಗುತ್ತಿರುವುದು ದುರಾದೃಷ್ಟ, ನಾನು ಸುಮಾರು 30 ಸಾವಿರ ಮತಗಳಿಂದ ಗೆಲ್ಲಬೇಕಿತ್ತು, ಚುನಾವಣೆ ಕೇವಲ ಸಮಾಜದ ಕನ್ನಡಿ,ಆದರೆ ಚುನಾವಣೆಗಳು ಸಮಾಜ ಒಡೆಯುವ ಸಾಧನವಾಗುತ್ತಿರುವುದು ವಿಪರ್ಯಾಸ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com