ಮೇಯರ್ ಚುನಾವಣೆ ಸೋಲು: ಅಶೋಕ್ ಗೆ ಸಂತೋಷ್ ತಪರಾಕಿ: ಮಾಜಿ ಡಿಸಿಎಂ ಪರ ಬಿಎಸ್ ವೈ ಬ್ಯಾಟಿಂಗ್

ರಾಜ್ಯ ಬಿಜೆಪಿ ಅಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ನಡುವಿನ ಶೀತಲ ಸಮರಕ್ಕೆ ....
ಸಂತೋಷ್ , ಆರ್ .ಅಶೋಕ್ ಮತ್ತು ಯಡಿಯೂರಪ್ಪ
ಸಂತೋಷ್ , ಆರ್ .ಅಶೋಕ್ ಮತ್ತು ಯಡಿಯೂರಪ್ಪ
Updated on
ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷ ಬಿ,ಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ನಡುವಿನ ಶೀತಲ ಸಮರಕ್ಕೆ ಬಿಬಿಎಂಪಿ ಮೇಯರ್ ಚುನಾವಣೆ ವೇದಿಕೆಯಾಗಿ ಮಾರ್ಪಟ್ಟಿದೆ. 
ಮಾಜಿ ಡಿಎಸಿಎಂ ಆರ್ . ಅಶೋಕ್ ವಿರುದ್ಧ ಸಾಮಾಜಿಜ ಜಾಲತಾಣ ಫೇಸ್ ಬುಕ್ ನಲ್ಲಿ ಸಂತೋಷ್ ಕಿಡಿಕಾರಿದ್ದಾರೆ. ತಂಡದ ಸ್ಪೂರ್ತಿ ಇಲ್ಲದವರು, ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳದವರು ಗೆಲುವು ಸಾಧಿಸಲಾರರು ಎಂದು ಅಶೋಕ್ ವಿರುದ್ಧ ಸಂತೋಷ್ ಪರೋಕ್ಷವಾಗಿ ಕಿಡಿಕಾರಿದ್ದರು
ಬಿಬಿಎಂಪಿ ಮೇಯರ್​​-ಉಪಮೇಯರ್​ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲು ಪಕ್ಷದ ವೈಫಲ್ಯ ಕಾರಣ ಹೊರತು, ಯಾರನ್ನು ದೂರುವ ಅಗತ್ಯವಿಲ್ಲ. ಆರ್.ಅಶೋಕ್ ಅವರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ಪ್ರಯತ್ನಿಸಿದ್ಧಾರೆ. ಕೊನೆ ಘಳಿಗೆಯಲ್ಲಿ ಅನಂತ್ ಕುಮಾರ್ ಮತ್ತು ನಿರ್ಮಲಾ ಸೀತರಾಮನ್  ಇಲ್ಲದ ಕಾರಣ ನಾವು ಸೋಲಬೇಕಾಯಿತು' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​​ ಯಡಿಯೂರಪ್ಪ ಅವರು ಸಮರ್ಥಿಸಿಕೊಂಡಿದ್ದಾರೆ.
ಅನಗತ್ಯವಾಗಿ ಟೀಕಿಸುವುದು ಸರಿಯಲ್ಲ. ಅಶೋಕ್ ಮೇಲೆ ಕೆಲವರು ಸುಮ್ಮನೆ ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ತಿರುಗೇಟು ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com