ಮೈತ್ರಿ ಸರ್ಕಾರದ ಆಡಳಿತದಲ್ಲಿ ಕಾಂಗ್ರೆಸ್ ಕೋಡಂಗಿಯಾಗಿದೆ: ಬಿಜೆಪಿ ವ್ಯಂಗ್ಯ

ಮೈತ್ರಿ ಸರ್ಕಾರದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಕೋಡಂಗಿಯಾಗಿದೆ ಎಂದು ರಾಜ್ಯ ಬಿಜೆಪಿ ಶುಕ್ರವಾರ ವ್ಯಂಗ್ಯವಾಡಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮೈತ್ರಿ ಸರ್ಕಾರದ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಕೋಡಂಗಿಯಾಗಿದೆ ಎಂದು ರಾಜ್ಯ ಬಿಜೆಪಿ ಶುಕ್ರವಾರ ವ್ಯಂಗ್ಯವಾಡಿದೆ. 
ಜೆಡಿಎಸ್ ನಾಯಕರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ.ರೇವಣ್ಣ ಅವರು ನಿನ್ನೆಯಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಮೇಕೆದಾಟು ಯೋಜನೆ, ನೆರೆ ಪರಿಹಾರ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಸಭೆಯಲ್ಲಿ ಯಾವೊಬ್ಬ ಕಾಂಗ್ರೆಸ್ ಪ್ರತಿನಿಧಿ ಕೂಡ ಇಲ್ಲದೇ ಇರುವುದು ಎದ್ದು ಕಾಣುತ್ತಿತ್ತು. 
ಹೀಗಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವ್ಯಂಗ್ಯವಾಡಿರುವ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಕೋಡಂಗಿಯಾಗಿದೆ ಎಂದು ಹೇಳಿದೆ. 
ಜೆಡಿಎಸ್ ನಾಯಕರು ಗೃಹ ಸಚಿವರನ್ನು ಭೇಟಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಫೋಟೋವನ್ನು ಹಾಕಿರುವ ಬಿಜೆಪಿ, ಈಗ ಗೊತ್ತಾಯಿತಲ್ಲ ಸರ್ಕಾರವನ್ನು ನಡೆಸುತ್ತಿರುವುದು ಯಾರು ಎಂದು ಎಂದು ಬರೆದಿದೆ. 
ಬಿಜೆಪಿ ವ್ಯಂಗ್ಯ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು, ಸಭೆ ವೇಳೆ ಯಾರಿದ್ದರೂ ಎಂಬುದು ಮುಖ್ಯವಲ್ಲ. ಕೇಂದ್ರದಿಂದ ನೆರವು ಕೇಳುವುದು ಮುಖ್ಯ. ಕೇಂದ್ರದಿಂದ ನೆರವು ಕೇಳಲು ನಿರಾಕರಿಸುತ್ತಿರುವ ಬಿಜೆಪಿಗೆ ಹೇಳಿಕೆ ನೀಡುವ ಯಾವ ಹಕ್ಕೂ ಇಲ್ಲ ಎಂದು ಹೇಳಿದ್ದಾರೆ. 
ಇನ್ನು ಸಭೆ ವೇಳೆ ದೇವೇಗೌಡ ಅವರು ಭಾಗಿಯಾಗಿದ್ದನ್ನು ಸಿಎಂ ಕುಮಾರಸ್ವಾಮಿಯವರು ಸಮರ್ಥಿಸಿಕೊಂಡಿದ್ದು, ದೇವೇಗೌಡ ಅವರು ಭಾಗಿಯಾಗಿದ್ದರಿಂದ ನೆರವು ಕೇಳಲು ಕೇಂದ್ರದ ಗಮನ ಸೆಳೆಯಲು ಸಹಾಯವಾಯಿತು ಎಂದು ತಿಳಿಸಿದ್ದಾರೆ. 
ಜೆಡಿಎಸ್ ವಕ್ತಾರ ತನ್ವೀರ್ ಅಹ್ಮದ್ ಮಾತನಾಡಿ, ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಿರವ ಬಿಜೆಪಿ ಹತಾಶೆಯಲ್ಲಿದೆ. ಹೀಗಾಗಿಯೇ ಸಮಸ್ಯೆಗಳಿಲ್ಲದೆಯೇ ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಕಾಂಗ್ರೆಸ್ ಬೆಂಬಲವಿಲ್ಲದೆಯೇ ಮುಖ್ಯಮಂತ್ರಿಗಳು ಒಂದು ಸಣ್ಣ ನಿರ್ಧಾರವನ್ನು ತೆಗೆದುಕೊಳ್ಳುತ್ತಿಲ್ಲ. ಅವರು ಸರ್ಕಾರದ ಮುಖ್ಯಸ್ಥರಷ್ಟೇ. ಇಡೀ ಸರ್ಕಾರ ವಕ್ತಾರರಾಗಿ ಕೆಲಸ ಮಾಡಬಹುದು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com