ಸಂಸದರಾಗಿ ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಶಿ ಅತ್ಯುತ್ತಮ ಸಾಧನೆ: ಬಿಜೆಪಿ ಪರಾಮರ್ಶನ ವರದಿ

: ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಗಣನೀಯ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಆಂತರಿಕ ಕಾರ್ಯಕ್ಷಮತೆ ...
ಪ್ರಹ್ಲಾದ್ ಜೋಶಿ ಮತ್ತು ಪ್ರತಾಪ್ ಸಿಂಹ
ಪ್ರಹ್ಲಾದ್ ಜೋಶಿ ಮತ್ತು ಪ್ರತಾಪ್ ಸಿಂಹ
Updated on: 
ಬೆಂಗಳೂರು: ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರು ಗಣನೀಯ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಆಂತರಿಕ ಕಾರ್ಯಕ್ಷಮತೆ ಪರಿಶೀಲನಾ ವರದಿ ತಿಳಿಸಿದೆ,
ಪರಿಶೀಲನೆಯಲ್ಲಿ ಪಾಲ್ಗೊಂಡವರ ಪ್ರಕಾರ, ಪ್ರತಿಯೊಂದು ಲೋಕಸಭೆ ಕ್ಷೇತ್ರದ ಸಂಸದರ ಕಾರ್ಯಕ್ಷಮತೆಯನ್ನು ಆಗಾಗ್ಗೆ ಪರಿಶೀಲಿಸಲಾಗುತ್ತದೆ. ಕ್ಷೇತ್ರದಲ್ಲಿ ಇದ್ದ ಸಮಯ, ಸಂಸತ್ತಿನಲ್ಲಿ ಬಾಗವಹಿಸಿದ ಸಮಯ ಕೇಂದ್ರ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಪಕ್ಷದ ತತ್ವ ಸಿದ್ಧಾಂತಗಳ ಪ್ರಮೋಷನ್, ಮುಂತಾದ ವಿಷಯಗಳ ಆಧಾರದ ಮೇಲೆ ಕಾರ್ಯಕ್ಷಮತೆ ನಿರ್ಧರಿಸಲಾಗುತ್ತದೆ.
ಜೊತೆಗೆ ಕ್ಷೇತ್ರಕ್ಕೆ ಅಭ್ಯರ್ಥಿ ಆರಿಸುವಾಗ ಅಲ್ಲಿನ ಜನಸಂಖ್ಯೆಕೂಡ ಆಧರಿಸಿರಲಾಗುತ್ತದೆ., ಆದರೆ ಮೂಲಗಳ ಪ್ರಕಾರ ಪ್ರತಾಪ್ ಸಿಂಹ ಅವರಿಗೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ,
ಉತ್ತಮ ಸಾಧನೆಯ ಹೊರತಾಗಿಯೂ,ಅವರ ಕ್ಷೇತ್ರದಲ್ಲಿ ಜನಸಂಖ್ಯೆ ಹೆಚ್ಚಾಗಿದೆ, ಇದು ಪ್ರತಾಪ್ ಸಿಂಹ ಗೆ ಸಮಸ್ಯೆ ತರಬಹುದು ಎಂದು ನಿರೀಕ್ಷಿಸಲಾಗಿದೆ,. 2014 ರಲ್ಲಿ ಪ್ರತಾಪ್ ಸಿಂಹ ಬೆನ್ನಿಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನಿಂತಿದ್ದರು. ಆದರೆ ಈ ಬಾರಿ ಅದು ಪುನಾರಾವರ್ತನೆಯಾಗುವುದಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
ಮೈಸೂರು-ಕೊಡಗು ಕ್ಷೇತ್ರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯ ಘರ್ಷಣೆಗೆ ಕಾರಣವಾಗಬಹುದು, ಇದು ಬಿಜೆಪಿಗೆ ಸವಾಲು ಆಗಲಿದೆ, ಹಾಗಾಗಿ ಕೆಲವು ಸಂಸದರನ್ನು ಅವರ ಕ್ಷೇತ್ರ ಬದಲಾವಣೆ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com