ಸಿಎಂ ಕುಮಾರಸ್ವಾಮಿ, ಅನಿತಾ ಕುಟುಂಬದ ಒಟ್ಟು ಆಸ್ತಿ 167 ಕೋಟಿ ರೂ.!

ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಅನಿತಾ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದು ಅದರಲ್ಲಿ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ...
ಎಚ್ ಡಿ ಕುಮಾರಸ್ವಾಮಿ-ಅನಿತಾ
ಎಚ್ ಡಿ ಕುಮಾರಸ್ವಾಮಿ-ಅನಿತಾ
Updated on
ರಾಮನಗರ: ರಾಮನಗರ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಅನಿತಾ ಕುಮಾರಸ್ವಾಮಿ ಅವರು ಇಂದು ನಾಮಪತ್ರ ಸಲ್ಲಿಸಿದ್ದು ಅದರಲ್ಲಿ ತಮ್ಮ ಕುಟುಂಬ ಆಸ್ತಿ ವಿವರವನ್ನು ಘೋಷಿಸಿದ್ದಾರೆ. 
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ ಅವರ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಕುಟುಂಬದ ಆಸ್ತಿ ಬರೋಬ್ಬರಿ 167 ಕೋಟಿ ರುಪಾಯಿ ಎಂದು ಘೋಷಣೆ ಮಾಡಲಾಗಿದೆ. 
2013ರಲ್ಲಿ ಈ ಕುಟುಂಬದ ಆಸ್ತಿ ಮೌಲ್ಯವು 137 ಕೋಟಿ ರುಪಾಯಿ ಇತ್ತು. ಇದೀಗ 2018ರಲ್ಲಿ 167 ಕೋಟಿ ರುಪಾಯಿಗೆ ಏರಿಕೆ ಆಗಿದೆ. ಬಿಇ ಪದವೀಧರೆ ಆಗಿರುವ ಅನಿತಾ ಅವರು ಸ್ಥಿರಾಸ್ಥಿಗಿಂತ ಚರಾಸ್ತಿಗಳಲ್ಲಿಯೇ ಹೆಚ್ಚಿನ ಹೂಡಿಕೆಯನ್ನು ಮಾಡಿದ್ದಾರೆ. ಕಸ್ತೂರಿ ಮೀಡಿಯಾ ಪ್ರೈ.ಲಿ. ಕಂಪನಿಯಲ್ಲಿಅವರ ಹೂಡಿಕೆ ಬಹುಪಾಲು ಇದೆ. 2660 ಗ್ರಾಂನಷ್ಟು ಚಿನ್ನ, 17 ಕೆಜಿ ಬೆಳ್ಳಿ ಹಾಗೂ 40 ಕ್ಯಾರೆನ್ ನಷ್ಟ ವಜ್ರ ಹೊಂದಿದ್ದಾರೆ. ಇನ್ನು 8.29 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್ ಸನ್ ಬೈಕ್ ಹಾಗೂ 20 ಲಕ್ಷ ಮೌಲ್ಯದ ವ್ಯಾನ್ ಇವರ ಹೆಸರಿನಲ್ಲಿದೆ. 
ಎಚ್ ಡಿಕೆ ಕುಟುಂಬದ ಆಸ್ತಿ ಮೌಲ್ಯ
ಕುಮಾರಸ್ವಾಮಿ ಅವರ ಚರಾಸ್ತಿ- 7.8 ಕೋಟಿ, ಸ್ಥಿರಾಸ್ತಿ 35.10 ಕೋಟಿ, ಹೂಡಿಕೆ 3 ಸಾವಿರ, ಠೇವಣಿ 22.25 ಲಕ್ಷ, ಸಾಲ ನೀಡಿಕೆ 6.97 ಕೋಟಿ, ಚಿನ್ನಾಭರಣ ಮೌಲ್ಯ 24.52 ಲಕ್ಷ, ಕೈಯಲ್ಲಿರುವ ನಗದು 12 ಲಕ್ಷ, ವಾರ್ಷಿಕ ಆದಾಯ 15.72 ಲಕ್ಷ, ಪಡೆದ ಸಾಲ 2.94 ಕೋಟಿ. 
ಅನಿತಾ ಕುಮಾರಸ್ವಾಮಿ ಚರಾಸ್ತಿ- 94.22 ಕೋಟಿ, ಸ್ಥಿರಾಸ್ತಿ 30 ಕೋಟಿ, ಹೂಡಿಕೆ 69.79 ಕೋಟಿ, ಠೇವಣಿ 1.90 ಕೋಟಿ, ಸಾಲ ನೀಡಿಕೆ 17.6 ಕೋಟಿ, ಚಿನ್ನಾಭರಣ ಮೌಲ್ಯ 93.33 ಲಕ್ಷ, ಕೈಯಲ್ಲಿರುವ ನಗದು 32 ಲಕ್ಷ, ವಾರ್ಷಿಕ ಆದಾಯ 76.35 ಲಕ್ಷ, ಪಡೆದ ಸಾಲ 8.14 ಕೋಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com