ಬಳ್ಳಾರಿಯಲ್ಲಿ ಉಗ್ರಪ್ಪ ಪರ ಪ್ರಚಾರ: ವೇದಿಕೆ ಹಂಚಿಕೊಳ್ಳದ ಶಿವಕುಮಾರ್ ಮತ್ತು ಜಾರಕಿಹೊಳಿ ಸಹೋದರರು!

ಕಾಂಗ್ರೆಸ್ ನಾಯಕರಾದ ಜಾರಕಿಹೊಳಿ ಸಹೋದರರು ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ, ಪಕ್ಷದ ಅಭ್ಯರ್ಥಿ ಪರ ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಬಳ್ಳಾರಿ: ಕಾಂಗ್ರೆಸ್ ನಾಯಕರಾದ ಜಾರಕಿಹೊಳಿ ಸಹೋದರರು ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ, ಪಕ್ಷದ ಅಭ್ಯರ್ಥಿ ಪರ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ, ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ, ಆದರೆ ಬಳ್ಳಾರಿ ಲೋಕಸಭೆ ಚುನಾವಣೆ ಗೆಲ್ಲುವುದಷ್ಟೇ ಪ್ರಮುಖ ಉದ್ದೇಶವಾಗಿದೆ.
ಬುಧವಾರ ಜಾರಕಿಹೊಳಿ ಸಹೋದರರು ಕೂಡ್ಲಿಗಿಯಲ್ಲಿ ನಡೆದ ರ್ಯಾಲಿಯಲ್ಲಿ ಡಿ.ಕೆ ಶಿವಕುಮಾರ್ ಜೊತೆ ವೇದಿಕೆ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಕಳೆದ ವಾರ ಬಳ್ಳಾರಿ ಲೋಕಸಭೆ ಉಪ ಚುನಾವಣೆಗೆ ವಿ.ಎಸ್ ಉಗ್ರಪ್ಪ ನಾಮಪತ್ರ ಸಲ್ಲಿಸಿದಾಗಿನಿಂದ, ಒಳಜಗಳ ಮುಂದುವರಿದಿದೆ,  ಚುನಾವಣಾ ಸಂಬಂಧ ರಣ ತಂತ್ರ ರೂಪಿಸಲು ಕರೆದಿದ್ದ  ಸಭೆಗೂ ಕೂಡ  ಜಾರಕಿಹೊಳಿ ಸಹೋದರರು ಗೈರಾಗಿದ್ದರು.
ಇಬ್ಬರ ಮಧ್ಯೆ ಸಿಎಂ ಕುಮಾರ ಸ್ವಾಮಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇದು ಕಾಂಗ್ರೆಸ್ ಪಾಲಿಗೆ ಪರಿಹಾರವಲ್ಲ, ಆದರೆ ಶಿವಕುಮಾರ್ ಅವರ ನಿಯಂತ್ರಣದಲ್ಲಿಡಲು  ಜಾರಕಿಹೊಳಿ ಸಹೋದರರಿಗೆ ಇಷ್ಟವಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ,
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ತಮ್ಮ ಅನುಮತಿಯಿಲ್ಲ, ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆ ಪಕ್ಷದ ಮುಖಂಡರಿಗೆ ಇರಿಸು ಮುರಿಸು ಉಂಟು ಮಾಡಿತ್ತು, ಜೊತೆಗೆ ಶಿವಕುಮಾರ್ ತಮ್ಮ ಕೆಲಸವನ್ನು ಮಾತ್ರ ಮಾಡಬೇಕೆಂದು ಜಾರಕಿಹೊಳಿ ಹೇಳಿದ್ದರು.
ಇನ್ನೂ ಜಾರಕಿಹೊಳಿ ಮತ್ತು ಶಿವಕುಮಾರ್ ನಡುವಿನ ಜಗಳ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. 
ಅವರ ಬಿನ್ನಾಭಿಪ್ರಾಯಗಳು ವಯಕ್ತಿಕವಾದವು, ಅದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಇದರ ಲಾಭವನ್ನು ಪಡೆದುಕೊಳ್ಳಲು ಬಿಜೆಪಿ ಮುಂದಾಗಿದೆ, ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com