ಶಿವಕುಮಾರ್ ಜೊತೆಗಿನ ಫೈಟ್: ಬಳ್ಳಾರಿಯಿಂದ ರಮೇಶ್ ಜಾರಕಿಹೊಳಿ ಔಟ್; ಜಮಖಂಡಿಗೆ ಶಿಫ್ಟ್!

ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತು ಜಲಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ನಡುವಿನ ಜಟಾಪಟಿ ಬಳ್ಳಾರಿ ಲೋಕಸಭೆ ಉಪ ಚುನಾವಣೆ ಮೇಲೆ ...
ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ
ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ
ಬೆಳಗಾವಿ: ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಮತ್ತು ಜಲಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ನಡುವಿನ ಜಟಾಪಟಿ ಬಳ್ಳಾರಿ ಲೋಕಸಭೆ ಉಪ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದೆಂಬ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ನಾಯಕತ್ವ ರಮೇಶ್ ಜಾರಕಿಹೊಳಿ ಅವರನ್ನು ಬಳ್ಳಾರಿಯಿಂದ ಜಮಖಂಡಿಗೆ ಶಿಫ್ಟ್ ಮಾಡಲಾಗಿದೆ,
ಬಳ್ಳಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೂಡ್ಲಿಗಿ ವಿಧಾನಸಭೆ ಕ್ಷೇತ್ರದ ಉಸ್ತುವಾರಿಯನ್ನು ರಮೇಶ್ ಗೆ ನೀಡಲಾಗಿತ್ತು, ಶುಕ್ರವಾರ ಬೆಳಗಾವಿಗೆ ಆಗಮಿಸಿದ ರಮೇಶ್ ಅವರಿಗೆ ಜಮಖಂಡಿ ಕ್ಷೇತ್ರದ ಹೊಣೆಗಾರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ತಮ್ಮನ ಪರ ಪ್ರಚಾರ ಕಾರ್ಯದಲ್ಲಿ ರಮೇಶ್ ಭಾಗವಹಿಸಲಿದ್ದಾರೆ ಎಂದು ಜಮಖಂಡಿ ಕಾಂಗ್ರೆಸ್  ಅಭ್ಯರ್ಥಿ ಆನಂದ್ ನ್ಯಾಮಗೌಡ ಖಚಿತ ಪಡಿಸಿದ್ದಾರೆ. 
ಬಳ್ಳಾರಿ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಸತೀಶ್ ಜಾರಕಿಹೊಳಿ ಶನಿವಾರ ಪಾಲ್ಗೋಳ್ಳುತ್ತಾರೆ ಎಂಬ ಮಾಹಿತಿ ಕಾಂಗ್ರೆಸ್ ಉನ್ನತ ಮೂಲಗಳಿಂದ ತಿಳಿದು ಬಂದಿದೆ,  ರಮೇಶ್ ಬದಲಿಗೆ ಕೂಡ್ಲಿಗೆ ಕ್ಷೇತ್ರದ ಉಸ್ತುವಾರಿಯನ್ನು ಸತೀಶ್ ಗೆ ನೀಡಲಾಗುವುದು ಎಂದು ಹೇಳಲಾಗುತ್ತಿದೆ, ಹೀಗಾಗಿ ಸತೀಶ್ ಬಳ್ಳಾರಿಯಲ್ಲಿ ಪಕ್ಷವನ್ನು ಮತ್ತಷ್ಟು ಸಮರ್ಥಗೊಳಿಸಲು ಮುಂದಾಗಲಿದ್ದಾರೆ.
ಕೂಡ್ಲಿಗಿಯಲ್ಲಿ ಸಮರ್ಪಕವಾದ ಪ್ರಚಾರ ಕಾರ್ಯ ಕೈಗೊಳ್ಳಲು ಚಳ್ಳಕೆರೆ ಶಾಸಕ ರಘು ಮೂರ್ತಿ ಅವರಿಗೆ  ಕೇಳಲಾಗಿದೆ. ಇಬ್ಬರು ನಾಯಕರ ವೈಮನಸ್ಯವನ್ನು ಬಳ್ಳಾರಿ ಉಪ ಚುನಾವಣೆ ಮುಗಿಯುವವರೆಗೂ ಸಹಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.  ಬಳ್ಳಾರಿಯಲ್ಲಿ ಇಬ್ಬರಿಗೂ ಪ್ರತ್ಯೇಕ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಇಬ್ಬರ ನಡುವೆ ಹೊಂದಾಣಿಕೆಯಾಗದ ಕಾರಣ ಚುನಾವಣೆ ಮುಗಿಯುವವರೆಗೂ ಇಬ್ಬರನ್ನು ದೂರ ಇಡಲು ನಿರ್ಧರಿಸಿರುವ ಕಾಂಗ್ರಸ್ ರಮೇಶ್ ಅವರನ್ನು ಜಮಖಂಡಿಗೆ ಶಿಫ್ಟ್ ಮಾಡಿದೆ.
ಜಾರಕಿಹೊಳಿ ಸಹೋದರರು ಹಾಗೂ ಶಿವಕುಮಾರ್ ಅವರನ್ನು  ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ, ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಿಂದ ಆರಂಭವಾದ ಈ ಮೈಮನಸ್ಯ ಇಲ್ಲಿಯವರೆಗೂ ಬಂದಿದೆ. ಉಪ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿರುವ ಕಾಂಗ್ರೆಸ್ ಉನ್ನತ ನಾಯಕರು ಜಾರಕಿಹೊಳಿ ಭಿನ್ನಾಭಿಪ್ರಾಯ ಶಮನ ಮಾಡಲು ಆಸಕ್ತಿ ಹೊಂದಿಲ್ಲ, ಆದರೆ ಇಬ್ಬರನ್ನು ಪ್ರತ್ಯೇಕವಾಗಿ ಹಾಗೂ ಪರಸ್ಪರ ದೂರ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ, ಜಾರಕಿಹೊಳಿ ಜೊತೆಗಿನ ಜಗಳದಿಂದ ದೂರ ಇರುವ ಶಿವಕುಮಾರ್ ಬಳ್ಳಾರಿ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. 
ಕೂಡ್ಲಿಗಿಯಿಂದ ರಮೇಶ್ ಜಾರಕಿಹೊಳಿ ಅವರನ್ನು ಜಮಖಂಡಿಗೆ ಶಿಫ್ಟ್ ಮಾಡದಂತೆ ಪಕ್ಷದ ಹಲವು ಕಾರ್ಯಕರ್ತರು ಮನವಿ ಮಾಡಿದ್ದರು, ಆದರೆ ಪಕ್ಷಕ್ಕೆ ಇದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ, ಆದರೆ ಬಳ್ಳಾರಿಯಿಂದ ಜಮಖಂಡಿಗೆ ರಮೇಶ್ ಅವರನ್ನು ಶಿಫ್ಚ್ ಮಾಡಿರುವುದು ಕಾಂಗ್ರೆಸ್ ನಲ್ಲಿ ಹೊಸ ವಿವಾದಕ್ಕೆ ನಾಂದಿಯಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com