ಜಮಖಂಡಿ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಒಂದಾದ ಬಿಜೆಪಿ ಘಟಾನುಘಟಿಗಳು!

ಶಾಸಕ ಸಿದ್ದು ನ್ಯಾಮಗೌಡ ನಿಧನದ ನಂತರ ತೆರವಾಗಿದ್ದ ಜಮಖಂಡಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರನ್ನು ...
ಆನಂದ್ ನ್ಯಾಮಗೌಡ  ಪರ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು
ಆನಂದ್ ನ್ಯಾಮಗೌಡ ಪರ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರು
ಜಮಖಂಡಿ: ಶಾಸಕ ಸಿದ್ದು ನ್ಯಾಮಗೌಡ ನಿಧನದ ನಂತರ ತೆರವಾಗಿದ್ದ ಜಮಖಂಡಿ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದ್ ನ್ಯಾಮಗೌಡ ಅವರನ್ನು ಸೋಲಿಸಲು ಬಿಜೆಪಿ ಘಟಾನುಘಟಿಗಳೆಲ್ಲಾ ಒಂದಾಗಿದ್ದಾರೆ. ಈ ಸುವರ್ಣವಕಾಶವನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಮುಖಂಡತ್ವದಲ್ಲಿ ಸಂಗಮೇಶ್ ನಿರಾಣಿ, ಬಸವರಾಜ್ ಸಿಂಧೂರ್ ಮತ್ತು ಉಮೇಶ್ ಮಹಾಬಲಶೆಟ್ಟಿ,  ಬಿಜೆಪಿ ಅಭ್ಯರ್ಥಿಯ ಪರ ಪ್ರಚಾರ ನಡೆಸಿದ್ದಾರೆ. ಶ್ರೀಕಾಂತ್ ಕುಲಕರ್ಣಿ ಈ ಬಾರಿ ಗೆಲುವು  ಸಾಧಿಸುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ  ನಿರಾಣಿ 25 ಸಾವಿರ ಮತಗಳಿಸಿದ್ದರು, ಕುಲಕರ್ಣಿ ಸಿದ್ದು ನ್ಯಾಮಗೌಡ ವಿರುಗ್ಘ 2,700 ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಕುಲಕರ್ಣಿ ಅವರನ್ನು ಕಣಕ್ಕಿಳಿಸದಂತೆ ಹಲವರು ಒತ್ತಾಯ ಮಾಡಿದ್ದರು, ಈ ಎಲ್ಲಾ ಅಡೆತಡೆಗಳ ನಡುವೆ ಕುಲಕರ್ಣಿ ಅವರನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಶ್ರೀಕಾಂತ್ ಕುಲಕರ್ಣಿ ಅವರ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಭಿನ್ನಮತೀಯರ ಚಿತಾವಣೆಯಿಂದಾಗಿ ಬಿಜೆಪಿ ಅಭ್ಯರ್ಥಿ ಸೋಲಾಗಿತ್ತು, ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಭ್ಯರ್ಥಿ ಅನನುಭವಿ, ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡುವ  ಅವಶ್ಯಕತೆಯಿದೆ, ಲಿಂಗಾಯತ ಮತಗಳೇ ಹೆಚ್ಚು ಇರುವ ಈ ಕ್ಷೇತ್ರದಲ್ಲಿ ಸಿದ್ದು ನ್ಯಾಮಗೌಡ ಅಭಿವೃದ್ಧಿ ವೈಫಲ್ಯ ತಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಶ್ರೀಕಾಂತ್ ಕುಲಕರ್ಣಿ ಹೇಳಿದ್ದಾರೆ.
ಕಾಂಗ್ರೆಸ್ ಸಿದ್ದು ನ್ಯಾಮಗೌಡ ನಿಧನದ ಅನುಕಂಪದ ಅಲೆಯ ಮೇಲೆ ಗೆಲುವು ಸಾಧಿಸುವ ಭರವಸೆಯಲ್ಲಿದೆ, ಕಾಂಗ್ರೆಸ್ ನ ಪ್ರಮುಖ ನಾಯಕರು ಆನಂದ್ ನ್ಯಾಮಗೌಡ ಅವರ ಗೆಲುವಿಗಾಗಿ ಬಂದು ಪ್ರಚಾರ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com