ವಿಧಾನ ಪರಿಷತ್ ಉಪ ಚುನಾವಣೆ: ವಿಜಯಪುರ, ಬಾಗಲಕೋಟೆಯಲ್ಲಿ ಮತದಾನ ಪ್ರಾರಂಭ

ವಿಧಾನ ಪರಿಷತ್ ಉಪ ಚುನಾವಣೆಗಾಗಿ ಇಂದು ವಿಜಯಪುರ ಹಾಗೂ ಬಾಗಲ್ಕೋಟೆಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಿಜಯಪುರ: ವಿಧಾನ ಪರಿಷತ್ ಉಪ ಚುನಾವಣೆಗಾಗಿ ಇಂದು ವಿಜಯಪುರ ಹಾಗೂ ಬಾಗಲ್ಕೋಟೆಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ.
ಬೆಳಿಗ್ಗೆ ಎಂಟಕ್ಕೆ ಮತದಾನ ಪ್ರಾರಂಭವಾಗಿದ್ದು ಸಂಜೆ ನಾಲ್ಕರವರೀಗೆ ನಡೆಯಲಿದೆ. ಎರಡೂ ಜಿಲ್ಲೆಗಳಲ್ಲಿ ಒತ್ಟು 8237 ಮತದಾರರಿದ್ದು  7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎರಡೂ ಜಿಲ್ಲೆಗಳಲ್ಲಿ ಒತ್ಟಾರೆ 38 ಮತಗಟ್ಟೆಗಳಿದ್ದು 16 ಅತಿ ಸೂಕ್ಷ್ಮ, 14 ಸೂಕ್ಷ್ಮ, 8 ಸಾಧಾರಣ ಮತಗಟ್ಟೆಗಳಿದೆ. 
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಬಳಿಕ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಮೈತ್ರಿಕೂಟದ ಅಭ್ಯರ್ಥಿಯಾಗಿ ಎಂ.ಬಿ. ಪಾಟೀಲ್‌ ಸಹೋದರ ಸುನೀಲ್‌ ಗೌಡ ಕಣದಲ್ಲಿದ್ದರೆ ಬಿಜೆಪಿ ಅಭ್ಯರ್ಥಿಯಾಗಿ ಗೂಳಪ್ಪ ಶಟಗಾರ ಸ್ಪರ್ಧೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com