ಆನ್ ಲೈನ್ ನಲ್ಲಿ ಜೆಡಿಎಸ್ ಸಕ್ರಿಯ; ಸೋಷಿಯಲ್ ಮೀಡಿಯಾಗೆ ಹೊಸ ರೂಪ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಜೆಡಿಎಸ್ ಸಾಮಾಜಿಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಜೆಡಿಎಸ್ ಸಾಮಾಜಿಕ ಮಾಧ್ಯಮ ತಂಡ ಹೊಸ ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ.

ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕೇಂದ್ರದ ಪಕ್ಕದಲ್ಲಿಯೇ ಜೆಡಿಎಸ್ ನ ಸೋಷಿಯಲ್ ಮೀಡಿಯಾ ಕೇಂದ್ರ ಕೂಡ ತಲೆಯೆತ್ತಿದೆ. ಎರಡು ಅಂತಸ್ತಿನ ಮನೆ ಜೆಡಿಎಸ್ ಗೆ ಮುಂದಿನ ಚುನಾವಣೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕಾರ್ಯತಂತ್ರ ರೂಪಿಸುವ ಕೇಂದ್ರವಾಗಿದೆ. ಎರಡು ತಿಂಗಳ ಹಿಂದಷ್ಟೇ ಇದು ಉದ್ಘಾಟನೆಯಾಗಿದೆ.

ಇಲ್ಲಿ ಸುಮಾರು 50 ಯುವಕರ ತಂಡ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಪಕ್ಷದ ಕುರಿತು ವಿಷಯಗಳನ್ನು ಸಂಗ್ರಹಿಸಿ ಎಲ್ಲಾ ಸೋಷಿಯಲ್ ಮೀಡಿಯಾ ಸೈಟ್ ಗಳಿಗೆ ಅಪ್ ಲೋಡ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಹಿಂದೆ ಸರಿದಿದ್ದ ಜೆಡಿಎಸ್ ಕಾರ್ಯಕರ್ತರ ಚಟುವಟಿಕೆಗಳು ಇಂದು ಹೆಚ್ಚಾಗಿದೆ. ಆದರೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಕಚೇರಿಯಲ್ಲಿ ಕಳೆದ ಕೆಲ ತಿಂಗಳಿನಿಂದ ಅಷ್ಟೊಂದು ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬರುತ್ತಿಲ್ಲ.

ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ನ ಮಾಧ್ಯಮ ಕೇಂದ್ರ ಮತ್ತು ಸೋಷಿಯಲ್ ಮೀಡಿಯಾ ಕೇಂದ್ರ ಶೇಷಾದ್ರಿಪುರಂನಲ್ಲಿತ್ತು. ಇದೀಗ ನಗರದ ಕೇಂದ್ರ ಭಾಗಕ್ಕೆ ಸೋಷಿಯಲ್ ಮೀಡಿಯಾ ಕೇಂದ್ರವನ್ನು ವರ್ಗಾಯಿಸಿದ್ದೇವೆ. ಅಲ್ಲಿ ವಿಷಯಗಳು, ಪ್ರಚಾರ ಅಭಿಯಾನಗಳನ್ನು ತಯಾರಿಸುವುದು, ವಿಡಿಯೊಗಳನ್ನು ಎಡಿಟ್ ಮಾಡುವುದು ಮತ್ತು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರ ಎಲ್ಲಾ ಚಟುವಟಿಕೆಗಳನ್ನು ಯೂಟ್ಯೂಬ್, ಟ್ವಿಟ್ಟರ್ ಮತ್ತು ಫೇಸ್ ಬುಕ್ ಗೆ ಅಪ್ ಲೋಡ್ ಮಾಡುತ್ತೇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜೆಡಿಎಸ್ ನ ಸೋಷಿಯಲ್ ಮೀಡಿಯಾ ಗ್ರೂಪ್ ನಲ್ಲಿ ವೃತ್ತಿಪರ ಯುವಕರ ತಂಡವೊಂದಿದೆ. ಪ್ರತ್ಯೇಕ ಐಟಿ ಕೇಂದ್ರವೊಂದು ಅದನ್ನು ನಿಭಾಯಿಸುತ್ತದೆ ಎಂದು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com