ಅಸಮಾಧಾನವಿದ್ದರೆ ಸಿಎಂ, ವರಿಷ್ಠರ ಬಳಿ ಬಂದು ಹೇಳಲಿ: ಜಾರಕಿಹೊಳಿ ಬ್ರದರ್ಸ್'ಗೆ ಪರಮೇಶ್ವರ್

ಅಸಮಾಧಾನವಿದ್ದರೆ, ಮುಖ್ಯಂತ್ರಿ, ನನ್ನ ಬಳಿ ಅಥವಾ ಪಕ್ಷದ ವರಿಷ್ಟರ ಬಳಿ ಬಂದು ಹೇಳಲಿ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಜಾರಕಿಹೊಳಿ ಸಹೋದರರಿಗೆ ಪರೋಕ್ಷವಾಗಿ ಗುರುವಾರ ಎಚ್ಚರಿಕೆ...
ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್
ಬೆಂಗಳೂರು: ಅಸಮಾಧಾನವಿದ್ದರೆ, ಮುಖ್ಯಂತ್ರಿ, ನನ್ನ ಬಳಿ ಅಥವಾ ಪಕ್ಷದ ವರಿಷ್ಟರ ಬಳಿ ಬಂದು ಹೇಳಲಿ ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಜಾರಕಿಹೊಳಿ ಸಹೋದರರಿಗೆ ಪರೋಕ್ಷವಾಗಿ ಗುರುವಾರ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. 
ಗಣೇಶ ಚತುರ್ತಿ ಹಿನ್ನಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಶುಭಕೋರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಜಾರಕಿಹೊಳಿ ಸಹೋದರರ ಅಸಮಾಧಾನಕ್ಕೆ ನಾವು ಬಗ್ಗುವುದಿಲ್ಲ. ಬಿಕ್ಕಟ್ಟುಗಳಿಗೆ ಕಡಿವಾಣ ಹಾಕುತ್ತೇವೆ. ಶೀಘ್ರದಲ್ಲಿಯೇ ಸಮಸ್ಯೆಯನ್ನು ಬಗೆಹರಿಸುತ್ತೇವೆಂದು ಹೇಳಿದ್ದಾರೆ. 
132 ವರ್ಷಗಳಿಂದ ಕಾಂಗ್ರೆಸ್ ಏಳು-ಬೀಳುಗಳನ್ನು ನೋಡುತ್ತಾ ಬಂದಿದೆ, ಜಾರಕಿಹೊಳಿ ಸಹೋದರರಿಗೆ ಅಸಮಾಧಾನಗಳಿದ್ದರೆ, ನನ್ನ ಬಳಿ, ಮುಖ್ಯಮಂತ್ರಿಗಳ ಬಳಿ ಅಥವಾ ಪಕ್ಷದ ವರಿಷ್ಠರ ಬಳಿ ಬಂದು ಹೇಳಲಿ ಎಂದು ಹೇಳಿದ್ದಾರೆ. 
ಇದೇ ವೇಳೆ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ಕುರಿತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿಕೆ.ಶಿವಕುಮಾರ್ ಅವರಿದೆ ಜವಾಬ್ದಾರಿ ನೀಡಲಾಗಿತ್ತು. ಹೀಗಾಗಿ ಅವರು ಹೋಗಿ ಬರುತ್ತಿದ್ದರು. ಆದರೆ, ಬೆಳಗಾವಿ ರಾಜಕೀಯಕ್ಕೆ ಅವರು ಕೈ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com