ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರಿಂದ ರಾಜಿನಾಮೆ ಕೊಡಿಸಿ: ಬಿಜೆಪಿಗೆ ಪರಮೇಶ್ವರ್ ನಾಯಕ್ ಸವಾಲು

ಯುರೋಪ್ ಪ್ರವಾಸದಿಂದ ವಾಪಾಸಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಬಿಜೆಪಿಯವರಿಗೆ ತಾಕತ್ತಿದ್ದರೇ ಕಾಂಗ್ರೆಸ್ ಶಾಸಕರಿಂದ ರಾಜಿನಾಮೆ
ಪಿ.ಟಿ ಪರಮೇಶ್ವರ್
ಪಿ.ಟಿ ಪರಮೇಶ್ವರ್
Updated on
ಬೆಂಗಳೂರು: ಜಾರಕಿಹೊಳಿ ಸಹೋದರರ ಬಂಡಾಯ ಶಮನಪಡಿಸಲು  ಕಾಂಗ್ರೆಸ್ ನಾಯಕರು ಹರ ಸಾಹಸ ಪಡುತ್ತಿರುವ ಹೊತ್ತಲ್ಲೇ ಹರಪ್ಪನಹಳ್ಳಿ ಶಾಸಕ ಪಿ.ಟಿ ಪರಮೇಶ್ವರ್ ನಾಯಕ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಯುರೋಪ್ ಪ್ರವಾಸದಿಂದ ವಾಪಾಸಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಬಿಜೆಪಿಯವರಿಗೆ ತಾಕತ್ತಿದ್ದರೇ ಕಾಂಗ್ರೆಸ್ ಶಾಸಕರಿಂದ ರಾಜಿನಾಮೆ ಕೊಡಿಸಲಿ ಎಂದು ಹೇಳಿದ್ದಾರೆ.
ನಾವು ಮುಂಬೈಗೆ ಹೋಗತ್ತಿಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ಜಾರಕಿಹೊಳಿ ಸಹೋದರರು ಸೇರಿದಂತೆ ನಾವೆಲ್ಲರೂ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ಆದೇಶ ಪಾಲಿಸುತ್ತೇವೆ ಎಂದು ಹೇಳಿದ್ದಾರೆ,
ರೇಣುಕಾಚಾರ್ಯ ತಾಕತ್ತು ಇಡಿ ರಾಜ್ಯಕ್ಕೆ ಗೊತ್ತು ಅವರ ಬಗ್ಗೆ ನಾನು ಮಾತನಾಡುವುದಿಲ್ಲ, ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com