ಬಿಜೆಪಿಗೆ ತಿರುಗೇಟು ನೀಡಿ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ರಣತಂತ್ರ

ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಮೈತ್ರಿ ಸರ್ಕಾರ ಇದೀಗ ಬಿಜೆಪಿಗೆ ತಿರುಗೇಟು ನೀಡಲು ರಣತಂತ್ರಗಳನ್ನು...
ಬಿಜೆಪಿ ತಿರುಗೇಟು ನೀಡಿ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ರಣತಂತ್ರ
ಬಿಜೆಪಿ ತಿರುಗೇಟು ನೀಡಿ, ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ರಣತಂತ್ರ
ಬೆಂಗಳೂರು: ಜೆಡಿಎಸ್, ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆದುಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಯತ್ನ ನಡೆಸುತ್ತಿದೆ ಎಂದು ಆರೋಪಿಸಿರುವ ಮೈತ್ರಿ ಸರ್ಕಾರ ಇದೀಗ ಬಿಜೆಪಿಗೆ ತಿರುಗೇಟು ನೀಡಲು ರಣತಂತ್ರಗಳನ್ನು ರೂಪಿಸಲು ಆರಂಭಿಸಿದೆ. 
ಆಪರೇಷನ್ ಕಮನದ ಭೀತಿಯಿಂದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರತೆಯಿಂದ ಕಾಪಾಡಲು ಜಂಟಿ ಕಾರ್ಯಂತ್ರ ರೂಪಿಸುವ ಸಂಬಂಧ ಸಿದ್ದರಾಮಯ್ಯ ನಿವಾಸ ಕೇವೇರಿಯಲ್ಲಿ ಸಭೆ ನಡೆಸಿದ್ದು, ಸಭೆಯಲ್ಲಿ ಕುಮಾರಸ್ವಾಮಿಯವರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ ಅವರು, ಆಪರೇಷನ್ ಕಮಲ ವಿಚಾರವನ್ು ಮುಂದಿಟ್ಟುಕೊಂಡು ಬಿಜೆಪಿಗೆ ದೊಡ್ಡ ಹೊಡೆತವನ್ನು ನೀಡಬಹುದಿತ್ತು. ಆದರೆ, ನಿಮ್ಮ ದಗೆ ಎಬ್ಬಿಸುವ ಹೇಳಿಕೆಯು ಇಂತಹ ಅವಕಾಶ ಕೈಚೆಲ್ಲಿ ಹೋಗುವಂತೆ ಮಾಡಿದೆ. ಬಿಜೆಪಿಗೆ ಸಮ್ಮಿಶ್ರ ಸರ್ಕಾರದ ವಿರುದ್ಧ ಹೋರಾಡಲು ಅಸ್ತ್ರ ದೊರಕಿದೆ. ಇಂತಹ ಹೇಳಿಕೆ ನೀಡುವ ಮುನ್ನ ಎಚ್ಚರ ವಹಿಸಿ ಎಂದು ತಿಳಿಸಿದ್ದಾರೆಂದು ತಿಳಿದುಬಂದಿದೆ. 
ಕಾಂಗ್ರೆಸ್ ನಾಯಕರಾದ ದಿನೇಶ್ ಗುಂಡುರಾವ್, ಈಶ್ವರ್ ಖಂಡ್ರೆ, ಡಿ.ಕೆ. ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿ ಪರಮೇಶ್ವರ್ ಇದ್ದ ಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ಮಾಸ್ಟರ್ ಗಿರಿ ತೋರಿಸಿದ್ದಾರೆ. 
ಯಾವುದೇ ಸಮಸ್ಯೆಗಳಿಲ್ಲದಂತೆ ಸರ್ಕಾರ ಮುಂದುವರೆಯಬೇಕಾದರೆ, ಕಾಂಗ್ರೆಸ್ ಜೊತೆಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ, ಮತ್ತಷ್ಟು ಶ್ರಮವನ್ನು ಹಾಕುವಂತೆಯೂ ಸಭೆಯಲ್ಲಿ ಕುಮಾರಸ್ವಾಮಿಯವರಿಗೆ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆ. 
ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರು ಇಂತಹ ಹೇಳಿಕೆ ನೀಡಿದರೆ, ಅದನ್ನು ರಾಜ್ಯಪಾಲರು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬಹುದು. ಇದರ ಆಧಾರದ ಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ನಾಯಕರಿಗೆ ರಕ್ಷಣೆಯಿಲ್ಲ ಎಂದು ರಾಷ್ಟ್ರಮಟ್ಟದಲ್ಲಿ ಬಿಂಬಿಸಬಹುದು. ಇದು ಸರ್ಕಾರಕ್ಕೆ ಅತ್ಯಂತ ಮುಜುಗರ ತರುವ ಸಾಧ್ಯತೆಯಿದೆ. ನಮ್ಮ ಹೇಳಿಕೆಗಳು ನಮಗೆ ಬೂಮ್'ರಾಂಗ್ ಆಗದಂತೆ ಇರಬೇಕು. 
ಆಪರೇಷನ್ ಕಮಲ ವಿಚಾರದಲ್ಲಿ ನೀವು ಇಷ್ಟೊಂದು ಆತಂಕಪಡುವ ಅಗತ್ಯವಿರಲಿಲ್ಲ. ಆ ಬಗ್ಗೆ ತುಂಬಾ ಆತಂಕ ಉಂಟಾಗಿದ್ದರಿಂದಲೇ ನೀವು ಈ ರೀತಿಯ ಹೇಳಿಕೆ ನೀಡಿದ್ದೀರಿ. ಬಿಜೆಪಿಗೆ ಸರ್ಕಾರ ಸಚಿಸಲು ಬೇಕಾದಷ್ಟು ಶಾಸಕರು ಕಾಂಗ್ರೆಸ್ ನಿಂದ ಹೋಗುವುದಿಲ್ಲ. ಈ ಬಗ್ಗೆ ಅನಗತ್ಯವಾಗಿ ಆತಂಕ ಪಟ್ಟು ತೊಂದರೆಗೆ ಸಿಲುಕಿಕೊಳ್ಳಬಾರದು. ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಎಲ್ಲವನ್ನೂ ಒಟ್ಟಿಗಿದ್ದು ಮಾಡೋಣಾ ಎಂಬ ಭರವಸೆಯನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ. 
ಯಾವುದೇ ಕಾಂಗ್ರೆಸ್ ಶಾಸಕರೂ ಪಕ್ಷವನ್ನು ಬಿಡುವುದಿಲ್ಲ ಎಂಬ ವಿಶ್ವಾಸವಿದೆ: ಖಂಡ್ರೆ
ರಾಜ್ಯದ ಜನತೆಯನ್ನು ಬಿಜೆಪಿ ವಿರುದ್ಧ ದಂಗೆ ಏಳಿಸಬೇಕಾಗುತ್ತದೆ ಎಂಬ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವ ಹೇಳಿಕೆ ವಿರುದ್ದ ಬಿಜೆಪಿ ತೀವ್ರವಾಗಿ ಕಿಡಿಕಾರಿದ್ದು, ಆಡಳಿತಾರೂಢ ಸರ್ಕಾರದ ವಿರುದ್ಧ ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ನಿನ್ನೆಯಷ್ಟೇ ದೂರು ನೀಡಿದೆ. 
ಬಿಜೆಪಿ ದೂರು ನೀಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕೂಡ ಬಿಜೆಪಿ ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನ ನಡೆಸುತ್ತಿದೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ದೂರು ನೀಡಿದೆ. 
ಈ ನಡುವಲ್ಲೇ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆಯವರು ಯಾವುದೇ ಕಾಂಗ್ರೆಸ್ ಶಾಸಕರು ಪಕ್ಷ ಬಿಡುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರಹೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com