ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳಕರ್ ಅವರು, ನಾನು ಕಳೆದ ಮೇ 16 ಮತ್ತು 17ರಂದು ಹೈದರಾಬಾದ್ ನಲ್ಲಿದ್ದಾಗ ನನಗೆ ಬಿಜೆಪಿ ಮುಖಂಡರೊಬ್ಬರಿಂದ ಕರೆ ಬಂದಿತ್ತು. ಕಾಂಗ್ರೆಸ್ ಗೆ ರಾಜಿನಾಮೆ ನೀಡಿ ಬಿಜೆಪಿ ಸೇರಿ ಎಂದು ಆಹ್ವಾನ ನೀಡಿದರು ಎಂದು ಆರೋಪಿಸಿದ್ದಾರೆ. ಆದರೆ ಆಫರ್ ನೀಡಿದ ಬಿಜೆಪಿ ನಾಯಕರ ಹೆಸರು ಹೇಳಲು ನಿರಾಕರಿಸಿದರು.