ಸಿದ್ದರಾಮಯ್ಯ
ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರದ ಪಾಲಿಗೆ ನಾನೇ ಟ್ರಬಲ್ ಶೂಟರ್: ಮಾಜಿ ಸಿಎಂ ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರದ ಪಾಲಿಗೆ ಟ್ರಬಲ್ ಶೂಟರ್ ಎಂದಿಎಂದಿಗೂ ಣಾನೇ ಆಗಿರುತ್ತೇನೆ. ಇದೇ ಕಾರಣಕ್ಕಾಗಿ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷನಾಗಿ ಮಾಡಲಾಗಿದೆ. ಎಂದು ಮಾಜಿ ಮುಖ್ಯಮಂತ್ರಿ....
ಮೈಸೂರು: ಸಮ್ಮಿಶ್ರ ಸರ್ಕಾರದ ಪಾಲಿಗೆ ಟ್ರಬಲ್ ಶೂಟರ್ ಎಂದಿಎಂದಿಗೂ ಣಾನೇ ಆಗಿರುತ್ತೇನೆ. ಇದೇ ಕಾರಣಕ್ಕಾಗಿ ನನ್ನನ್ನು ಸಮನ್ವಯ ಸಮಿತಿ ಅಧ್ಯಕ್ಷನಾಗಿ ಮಾಡಲಾಗಿದೆ. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಿದ್ದರಾಮಯ್ಯ ಸರ್ಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಅಕ್ಟೋಬರ್ 3ರ ಬಳಿಕ ಸಂಪುಟ ವಿಸ್ತರಣೆ ನಡೆಯಲಿದ್ದು ಸರ್ಕಾರ ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಕುರಿತು ರಾಜ್ಯದಲ್ಲಿ ಉತ್ತಮ ಅಭಿಪ್ರಾಯವಿದೆ. ರೈತರ ಸಾಲ ಮನ್ನಾ ಕುರಿತಂತೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ ಎಂದ ಸಿದ್ದರಾಮಯ್ಯ ಅಗತ್ಯವಾದರೆ ಮಾತ್ರ ಸಮನ್ವಯ ಸಮಿತಿ ಸಭೆ ಕರೆಯುತ್ತೇನೆ ಹೊರತಾಗಿ ವ್ಯಥಾ ಕಾಲಕ್ಷೇಪಕ್ಕಾಗಿ ಸಭೆ ಕರೆಯುವುದಲ್ಲ ಎಂದರು.
ನಮ್ಮ ಶಾಸಕರಲ್ಲಿ ಯಾರೂ ಸರ್ಕಾರದ ಕುರಿತಂತೆ ಭಿನ್ನಾಭಿಪ್ರಾಯ ಹೊಂದಿಲ್ಲ, ಸರ್ಕಾರವನ್ನು ಪತನಗೊಳಿಸುವ ಸುದ್ದಿಗಳೆಲ್ಲಾ ಮಾದ್ಯಮ ಸೃಷ್ಟಿ ಮಾತ್ರವೇ ಎಂದು ಅವರು ಹೇಳಿದ್ದಾರೆ.
ಮೈಸೂರು ಮೇಯರ್ ಆಯ್ಕೆ ಇನ್ನೂ ನಿರ್ಧಾರವಾಗಿಲ್ಲ
ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ವಿಚಾರ ನ್ಯಾಯಾಲಯದಲ್ಲಿದ್ದು ನ್ಯಾಯಾಲಯ ತೀರ್ಮಾನದ ಬಳಿಕವಷ್ಟೇ ಮೇಯರ್ ಕುರಿತಂತೆ ನಿರ್ಧರಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com