ನೆಹರು ಕೊಡುಗೆ ಬಗ್ಗೆ ಮಾತನಾಡಲು ನೀವು ಯಾರು? ಸಂತೋಷ್ ವಿರುದ್ಧ ದಿನೇಶ್ ಗುಂಡೂರಾವ್  ವಾಗ್ದಾಳಿ

ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. 
ನೆಹರು ಕೊಡುಗೆ ಬಗ್ಗೆ ಮಾತನಾಡಲು ನೀವು ಯಾರು? ಸಂತೋಷ್ ವಿರುದ್ಧ ದಿನೇಶ್ ಗುಂಡೂರಾವ್  ವಾಗ್ದಾಳಿ
Updated on

ಬೆಂಗಳೂರು: ಮಾಜಿ ಪ್ರಧಾನಿ ಜವಹರ್ ಲಾಲ್ ನೆಹರು ಅವರನ್ನು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಹರಿಹಾಯ್ದಿದ್ದಾರೆ. 

ಜವಹರ್ ಲಾಲ್ ನೆಹರು ಕೊಡುಗೆ ಬಗ್ಗೆ ಮಾತನಾಡಲು ಅವರು ಯಾರು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ. ದೇಶಕ್ಕಾಗಿ ಆರ್ ಎಸ್ ಎಸ್ ಕೊಡುಗೆ ಏನು ಎಂಬುದನ್ನು ಮೊದಲು ವಿವರಿಸಬೇಕಾಗಿದೆ ಎಂದು  ಆಗ್ರಹಿಸಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ನೀಡುವ ಮೂಲಕ ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿ ನೆಹರು ಮಾಡಿದ್ದ ಪ್ರಮಾದವನ್ನು ನರೇಂದ್ರ ಮೋದಿ ಸರಿಪಡಿಸಿದ್ದಾರೆ ಎಂಬ ಸತೀಶ್ ಹೇಳಿಕೆ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಬಿಜೆಪಿ ಹಾಗೂ ಆರ್ ಎಸ್ ಎಸ್ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ಅವರಿಗೆ ಇತಿಹಾಸವೇ ಗೊತ್ತಿಲ್ಲ, ದೇಶಕ್ಕಾಗಿ ನೆಹರು ನೀಡಿರುವ ಕೊಡುಗೆ ಬಗ್ಗೆ ಅರಿವಿಲ್ಲ , ನೆಹರು ಅವರ ನಿರ್ಧಾರದಿಂದಲೇ ಕಾಶ್ಮೀರ ನಮ್ಮ ಬಳಿ ಇದೆ ಎಂದಿದ್ದಾರೆ. 

ಬಿಜೆಪಿ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಎಲ್ಲ ಅಭಿವೃದ್ದಿ ಕಾಮಗಾರಿ ಸ್ಥಗಿತಗೊಂಡಿವೆ. ಮುಖ್ಯಮಂತ್ರಿ ಇನ್ನೂ ಖಾತೆ ಹಂಚಿಕೆ ಮಾಡಿಲ್ಲ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com