ಭವಿಷ್ಯದ ದೃಷ್ಠಿಯಿಂದ ಅಳೆದು ತೂಗಿ ಸಂಪುಟ ರಚನೆ: ಡಿ ವಿ ಸದಾನಂದ ಗೌಡ

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಆದಂತಹ ಗೊಂದಲಗಳಿಗೆ ಈ ಭಾರಿ ಆಸ್ಪದವಿಲ್ಲ , ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.
ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ
Updated on

ನವದೆಹಲಿ: ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಆದಂತಹ ಗೊಂದಲಗಳಿಗೆ ಈ ಭಾರಿ ಆಸ್ಪದವಿಲ್ಲ , ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಬಹಳಷ್ಟು ಹಿರಿಯ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಆದರೆ ಯಾರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಟ್ಟದ್ದಾಗಿದೆ. ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಅವರು ಅಳೆದು ತೂಗಿ ಸಂಪುಟ ರಚನೆ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಹಿರಿಯರು ಮತ್ತು ಹೊಸಬರ ಸಾಮರ್ಥ್ಯದ ಮೇಲೆ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಹಳೆ ಬೇರು ಹೊಸ ಚಿಗುರಿನಂತೆ ಸಂಪುಟವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿದಿದ್ದಾಗ ಉಂಟಾದ ಗೊಂದಲಗಳಿಗೆ ಈಗ ಆಸ್ಪದವಿಲ್ಲ
ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಜನ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಆದರೆ, ಯಾರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂಬುದು ಸಿಎಂ ಯಡಿಯೂರಪ್ಪ ವಿವೇಚನೆಗೆ ಬಿಟ್ಟದ್ದು. ಅವರು ಹೈಕಮಾಂಡ್ ನಿರ್ದೇಶನದಂತೆ ಅಳೆದು ತೂಗಿ ಸಂಪುಟ ರಚನೆ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಹಳಬರು ಮತ್ತು ಹೊಸಬರಿಗೆ ಸಾಮರ್ಥ್ಯ ನೋಡಿ ಅವಕಾಶ ನೀಡಲಾಗಿದೆ. ಈ ಸಚಿವ ಸಂಪುಟ ಹಳೆಯ ಬೇರು ಹೊಸ ಚಿಗುರಿನಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಸಂಪುಟ ರಚನೆ ಹಾಗೂ ಖಾತೆ ಹಂಚಿಕೆ ತಡವಾಗಿರುವ ಕುರಿತು ಮಾತನಾಡಿದ ಅವರು, 'ದಿನ ಒಂದೆರಡು ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ, ಎಲ್ಲವೂ ಸರಿಯಾಗಿ ಆಗಬೇಕಷ್ಟೆ. ಬಿಜೆಪಿಯಲ್ಲಿ ಆಗಿನ ಹಾಗೂ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈಗ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ವ್ಯವಸ್ಥೆ ಬಂದಿದೆ. ಹಿಂದೆ ನನ್ನನ್ನು ರೈಲ್ವೆ ಸಚಿವ ಸ್ಥಾನದಿಂದ ಬದಲಿಸಿದ್ದರು ನನಗಿಂತಲೂ ಸಮರ್ಥರಿದ್ದ ಕಾರಣಕ್ಕೆ ಬೇರೆಯವರಿಗೆ ಅವಕಾಶ ಕೊಟ್ಟರು. ಅದೇ ರೀತಿ ರಾಜ್ಯ ಸಚಿವ ಸಂಪುಟದಲ್ಲೂ ಸಾಮರ್ಥ್ಯ ನೋಡಿ ಅವಕಾಶ ನೀಡಲಾಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com