ರಮೇಶ್ ಜಾರಕಿಹೊಳಿ
ರಾಜಕೀಯ
ಆಕೆಯನ್ನು ಹೈದರಾಬಾದ್ ಗೆ ಕರೆದಿದ್ದರೇ ನನ್ನ ಮಕ್ಕಳು ಹಾಳಾಗಿ ಹೋಗಲಿ: ರಮೇಶ್ ಜಾರಕಿಹೊಳಿ
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನಾನು ಹೈದರಾಬಾದ್‌ಗೆ ಕರೆದಿದ್ದರೆ ನನ್ನ ಎರಡೂ ಮಕ್ಕಳು ಹಾಳಾಗಿ ಹೋಗಲಿ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್: ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ನಾನು ಹೈದರಾಬಾದ್‌ಗೆ ಕರೆದಿದ್ದರೆ ನನ್ನ ಎರಡೂ ಮಕ್ಕಳು ಹಾಳಾಗಿ ಹೋಗಲಿ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕ್ ನಲ್ಲಿ ಮಾತನಾಡಿದ ಅವರು ಹೈದರಾಬಾದ್ ಕಥೆಯನ್ನು ಡಿಸೆಂಬರ್ 6ರಂದು ಪತ್ರಿಕಾಗೋಷ್ಠಿ ಕರೆದು ಎಳೆ ಎಳೆಯಾಗಿ ಬಿಡಿಸಿ ಹೇಳುವೆ’ ಎಂದಿದ್ದಾರೆ.
ಅಥಣಿ, ಕಾಗವಾಡ ಚುನಾವಣಾ ಪ್ರಚಾರದಲ್ಲಿ ನನ್ನ ಬಗ್ಗೆ ಟೀಕೆ– ಟಿಪ್ಪಣಿಗಳು ನಡೆಯುತ್ತಿವೆ. ಡಿಸೆಂಬರ್ 6ರವರೆಗೆ ಏನೂ ಹೇಳುವುದಿಲ್ಲ. ಆ ನಂತರ ಎಲ್ಲದಕ್ಕೂ ಉತ್ತರ ನೀಡುವೆ ಎಂದು ತಿಳಿಸಿದ್ದಾರೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈಗಲೂ ನಮ್ಮ ನಾಯಕರಾಗಿದ್ದಾರೆ. ಆದರೆ, ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆಗಳನ್ನು ಮಾಡಬಾರದು. ಮಾಡಿದರೆ, ನಾವೂ ‘ಬಾಂಬ್’ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ