ಉಪ ಚುನಾವಣೆ ಸುದ್ದಿ ಸ್ವಾರಸ್ಯ: 106 ವರ್ಷದ ಅಜ್ಜಿಯಿಂದ ಮತದಾನ

ಕಾಂಗ್ರೆಸ್. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಪ್ರಮುಖವಾಗಿರುವ ಹಾಲಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 106 ವರ್ಷದ ಹಿರಿಯ ಮಹಿಳೆಯೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
106 ವರ್ಷದ ಅಜ್ಜಿಯಿಂದ ಮತದಾನ
106 ವರ್ಷದ ಅಜ್ಜಿಯಿಂದ ಮತದಾನ

ಮಂಡ್ಯ: ಕಾಂಗ್ರೆಸ್. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಪ್ರಮುಖವಾಗಿರುವ ಹಾಲಿ ಉಪ ಚುನಾವಣೆ ಮತದಾನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, 106 ವರ್ಷದ ಹಿರಿಯ ಮಹಿಳೆಯೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ 106 ವರ್ಷದ ಮಹಿಳೆ ಸಣ್ಣಮ್ಮ ಎಂಬುವವರು ತಮ್ಮ ಹಕ್ಕು ಚಲಾಯಿಸುವ ಮೂಲಕ ಮತದಾನದ ಪ್ರಾಮುಖ್ಯತೆಯನ್ನು ಸಾರಿದ್ದಾರೆ.

ತಾಲ್ಲೂಕಿನ ಸೊಳ್ಳೇಪುರ ಮತಗಟ್ಟೆಗೆ ತನ್ನ ಮೊಮ್ಮಕ್ಕಳ ಸಹಾಯದೊಂದಿಗೆ ಆಗಮಿಸಿದ ಸಣ್ಣಮ್ಮ, ಚುನಾವಣಾ ಸಿಬ್ಬಂದಿಗಳ ನೆರವು ಪಡೆದ ತಮ್ಮ ಹಕ್ಕು ಚಲಾಯಿಸಿದರು.  ಅಲ್ಲದೆ ಮತ ಚಾಲಾವಣೆ ಮಾಡಲು ಬಾರದ ಯುವ ಪೀಳಿಗೆಗೆ ಸಣ್ಣಮ್ಮ ಮಾದರಿಯಾದರು.

ವಾಸ್ತು ಪ್ರಕಾರವೇ ಮತದಾನ ಮಾಡಿದ ಜೆಡಿಎಸ್​​ ಅಭ್ಯರ್ಥಿ ಬಿ.ಎಲ್ ದೇವರಾಜ್
ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜ್ ಮತದಾನವನ್ನು ತಮ್ಮ ಹುಟ್ಟೂರಲ್ಲೇ ಮಾಡಿದ್ದಾರೆ. ಇನ್ನೊಂದು ವಿಶೇಷವೆಂದರೆ ವಾಸ್ತು ಪ್ರಕಾರ ಮತ ಚಲಾವಣೆ ಮಾಡಿರುವ ಇವರು, ಮತದಾನವ ವೇಳೆ ವಾಸ್ತು ಸರಿ ಇಲ್ಲದಕ್ಕೆ ಸಿಬ್ಬಂದಿ ಕರೆದು ಮತಯಂತ್ರ ತಿರುಗಿಸಿ ಹಕ್ಕು ಚಲಾಯಿಸಿದ ಪ್ರಸಂಗವೂ ಜರುಗಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com