ಹೈದರಾಬಾದ್ ಎನ್‍ಕೌಂಟರ್: ಪೊಲೀಸರಿಗೆ ಉದ್ಯಮಿಯಿಂದ ಒಂದು ಲಕ್ಷ ರೂ. ಬಹುಮಾನ

ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ಗುಜರಾತ್ ಉದ್ಯಮಿಯೊಬ್ಬರು ಬಹುಮಾನ ಘೋಷಿಸಿದ್ದಾರೆ.
ವಿಶ್ವನಾಥ್ ಸಜ್ಜನರ್
ವಿಶ್ವನಾಥ್ ಸಜ್ಜನರ್
Updated on

ಗಾಂಧಿನಗರ: ಹೈದರಾಬಾದ್‍ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಕ್ಕೆ ಗುಜರಾತ್ ಉದ್ಯಮಿಯೊಬ್ಬರು ಬಹುಮಾನ ಘೋಷಿಸಿದ್ದಾರೆ.

ಹೈದರಾಬಾದ್ ಪೊಲೀಸರ ಎನ್‌ಕೌಂಟರ್‌ಗೆ ಗುಜರಾತ್‍ನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪೊಲೀಸರ ಕ್ರಮವನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಪ್ರತಿಪಕ್ಷದ ನಾಯಕ ಪರೇಶ್ ಧನಾನಿ ಪೊಲೀಸರ ಕ್ರಮವನ್ನು ಪ್ರಶಂಸಿಸಿದ್ದಾರೆ. ಆರೋಪಿಗಳ ಹತ್ಯೆ ಕುರಿತು ಅಹಮದಾಬಾದ್ ಸೇರಿದಂತೆ ಅನೇಕ ಕಡೆ ಜನರು ಪಟಾಕಿ ಸಿಡಿಸಿ, ಸಂತೋಷ ವ್ಯಕ್ತಪಡಿಸಿದ್ದಾರೆ. 

ಇನ್ನು ಭಾವ್‍ನಗರ ಜಿಲ್ಲೆಯ ಮಹುವಾ ಪಟ್ಟಣದ ಉದ್ಯಮಿಯೊಬ್ಬರು ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ ಹೈದರಾಬಾದ್ ಪೊಲೀಸರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com