ಪೌರತ್ವ ಕಾಯ್ದೆ: ಬಿಜೆಪಿ ಜನಾದೇಶವನ್ನು ಗೌರವಿಸುತ್ತಿದೆ- ಸಿ.ಟಿ.ರವಿ

ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿತ್ತೋ ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಜನರು ಬಯಸಿದ್ದನ್ನೇ ಬಿಜೆಪಿ ಮಾಡಿದೆ. ಇದನ್ನು ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳು, ಜನಾದೇಶ ವಿರೋಧಿಸುವವರಾಗುತ್ತಾರೆಂದು ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ. 
ಸಿ.ಟಿ.ರವಿ
ಸಿ.ಟಿ.ರವಿ
Updated on

ಬೆಂಗಳೂರು: ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿತ್ತೋ ಅದೇ ಕಾರಣಕ್ಕೆ ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ. ಜನರು ಬಯಸಿದ್ದನ್ನೇ ಬಿಜೆಪಿ ಮಾಡಿದೆ. ಇದನ್ನು ವಿರೋಧಿಸುವವರು ಪ್ರಜಾಪ್ರಭುತ್ವದ ವಿರೋಧಿಗಳು, ಜನಾದೇಶ ವಿರೋಧಿಸುವವರಾಗುತ್ತಾರೆಂದು ಸಚಿವ ಸಿ.ಟಿ.ರವಿಯವರು ಹೇಳಿದ್ದಾರೆ. 

ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸಿರುವ ರವಿಯವರು, ಬಿಜೆಪಿಗೆ ಭಯಪಡಿಸುವ ಅಗತ್ಯವಿಲ್ಲ. ಯು.ಟಿ ಖಾದರ್ ರಂತಹ ಮನಸ್ಥಿಯಿಂದ ಗೋದ್ರಾ ಘಟನೆ ನಡೆಯಿತು. ಗೋದ್ರಾದಲ್ಲಿ ರೈಲಿಗೆ ಬೆಂಕಿ ಹಚ್ಚುವ ಹಾಗೂ ಕರ ಸೇವಕರನ್ನು ಸುಡುವ ಕೆಲಸಗಳಾಗಿರುವುದು ಇಂತಹ ನಾಯಕರಿಂದಲೇ. ಆದರೆ, ಗೋದ್ರಾ ರೈಲಿಗೆ ಬೆಂಕಿ ಹಚ್ಚಿದ ಘಟನೆಗೆ ಪ್ರತಿಯಾಗಿ ಏನಾಯಿತೆಂಬುದನ್ನೂ ಖಾದರ್ ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಕಾಂಗ್ರೆಸ್ ನಾಯಕರು ಪಾಕಿಸ್ತಾನ ಪ್ರಜೆಗಳಿಗೂ ಪೌರತ್ವ ನೀಡುವಂತೆ ಆಗ್ರಹಿಸುತ್ತಿದ್ದಾರೆ. ವಲಸಿಗರಿಗೂ ನುಸುಳುಕೋರರಿಗೂ ಸಾಕಷ್ಟು ವ್ಯತ್ಯಾಸಗಳಿದೆ. ಅಂತವರಿಗೆ ಆಧಾರ್ ಕಾರ್ಡ್ ನೀಡುವ ಪ್ರಶ್ನೆಯೇ ಿಲ್ಲ. ಸರ್ಕಾರ ತಮ್ಮ ಪರವಾಗಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆ ಇರುವುದರಿಂದಲೇ ಜನರು ತಾಳ್ಮೆಯಿಂದ ಇದ್ದಾರೆಂದು ತಿಳಿಸಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ ಖಾದರ್ ಅವರು, ಕಾಯ್ದೆ ವಿರುದ್ಧ ಈಶಾನ್ಯ ರಾಜ್ಯಗಳಲ್ಲಿ ಗಲಭೆ ಭುಗಿಲೆದ್ದಿದೆ. ಅದೇ ರೀತಿ ರಾಜ್ಯದಲ್ಲಿಯೂ ಗಲಭೆ ಸಂಭವಿಸಬಹುದು ಎಂದಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com