ದೋಸ್ತಿ ಸರ್ಕಾರ ರಕ್ಷಣೆಗೆ ಬಿಜೆಪಿ ಶಾಸಕರ ವಿರುದ್ಧ ಶಿಸ್ತು ಕ್ರಮದ ಬ್ರಹ್ಮಾಸ್ತ್ರ

ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡಿ, ಬಳಿಕ ಸರ್ಕಾರ ಪತನಗೊಳಿಸುವ ತಂತ್ರ ರೂಪಿಸಿರುವ ಬಿಜೆಪಿ, ಮೈತ್ರಿ ಕೂಟದ 11 ಶಾಸಕರು ವಿಧಾನ....
ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರ ಭಾಷಣ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡಿ, ಬಳಿಕ ಸರ್ಕಾರ ಪತನಗೊಳಿಸುವ ತಂತ್ರ ರೂಪಿಸಿರುವ ಬಿಜೆಪಿ, ಮೈತ್ರಿ ಕೂಟದ 11 ಶಾಸಕರು ವಿಧಾನ ಮಂಡಲ ಕಲಾಪಕ್ಕೆ ಗೈರು ಹಾಜರಾಗುವಂತೆ  ಮಾಡಿರುವುದು ದೋಸ್ತಿ ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಮೈತ್ರಿಕೂಟದಿಂದಲೂ ಪ್ರತಿತಂತ್ರಗಳು ಸಿದ್ದವಾಗಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಮುಖ್ಯ ಸಚೇತಕರು 'ವಿಪ್' ಜಾರಿ ಮಾಡಿದ್ದರೂ ಲೆಕ್ಕಿಸದೆ ಇಂದಿನ ಕಲಾಪಕ್ಕೆ 11 ಕ್ಕೂ ಹೆಚ್ಚು ಶಾಸಕರು ಗೈರು ಹಾಜರಾಗಿದ್ದರು.
ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಮುಜುರಗವನ್ನುಂಟು ಮಾಡಿರುವ ಬಿಜೆಪಿ ಮುಂದಿನ ಕಲಾಪಗಳಿಗೂ ಅಡ್ಡಿಯುಂಟು ಮಾಡುವ ಸಾಧ್ಯತೆಗಳು ನಿಚ್ಚಳವಾಗಿವೆ. ವಿಶೇಷವೆಂದರೆ ಫೆಬ್ರವರಿ 8 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡಿಸಲು ಅವಕಾಶ ನೀಡದೆ ಪ್ರತಿಭಟನೆ, ಧಿಕ್ಕಾರ ಕೂಗಿ ಆಯವ್ಯಯಕ್ಕೆ ಅಡ್ಡಿಪಡಿಸುವುದು ಬಿಜೆಪಿಯ ಪ್ರಮುಖ ತಂತ್ರವಾಗಿದೆ .
ಇದಕ್ಕೆ ಪ್ರತಿತಂತ್ರವಾಗಿ ಸರ್ಕಾರದ ಬಳಿಯೂ ಹಲವು ಪರ್ಯಾಯ ಕಾರ್ಯತಂತ್ರಗಳು ರೂಪುಗೊಂಡಿವೆ. ನಿರಂತರ ಪ್ರತಿಭಟನೆ, ಗದ್ದಲ ಎಬ್ಬಿಸುವ ಮೂಲಕ ಕಲಾಪ ಸೂಸೂತ್ರವಾಗಿ ನಡೆಸಲು ಅಡ್ಡಿಪಡಿಸುವ ಶಾಸಕರನ್ನು ಅಧಿವೇಶನ ಮುಗಿಯುವವರೆಗೆ ಅಮಾನತ್ತಿನಲ್ಲಿಡುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು  ಉನ್ನತ ಮೂಲಗಳು ತಿಳಿಸಿವೆ. 
ಎರಡನೆಯದಾಗಿ ಆಯವ್ಯಯ ಮಂಡಿಸಿ ಚರ್ಚೆ ನಡೆಸದೆಯೇ ಧರಣಿ, ಗದ್ದಲದ ನಡುವೆಯೂ ಧ್ವನಿಮತದ ಮೂಲಕ ಹಣಕಾಸು ವಿಧೇಯಕಗಳನ್ನು ಅಂಗೀಕಾರ ಮಾಡಿಕೊಳ್ಳುವ ಕುರಿತು ಪರಿಶೀಲನೆ ನಡೆಸಲಾಗಿದೆ. 
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಆಪರೇಷನ್ ಕಮಲ, ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟನೆ, ನಾಳೆ ಹಾಗೂ ಫೆ 8 ರ  ಬಜೆಟ್ ಮಂಡನೆಗೆ ಅಡ್ಡಿ ಮಾಡುವ ಶಾಸಕರ ಮೇಲೆ ಸ್ಪೀಕರ್ ಅವರು ಶಿಸ್ತು ಕ್ರಮ ಕೈಗೊಂಡು, ಸಂಸದೀಯ ಕಾರ್ಯಕಲಾಪದ ಘನತೆಯನ್ನು ಎತ್ತಿ ಹಿಡಿಯುವುದು ಸಹ ಒಂದು  ಭಾಗವಾಗಿದೆ. ಈ ಮೂಲಕ ಬಜೆಟ್ ಅಧಿವೇಶವನ್ನು ಸುಗಮವಾಗಿ ಸಂಪನ್ನಗೊಳಿಸುವ ಕಾರ್ಯತಂತ್ರವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com