ಕಮಲ ತೊರೆದು ಕಾಂಗ್ರೆಸ್ ಸೇರಿ: ಚನ್ನಪಟ್ಟಣ ಬಿಜೆಪಿ ಕಾರ್ಯಕರ್ತರಿಗೆ ಡಿಕೆಶಿ ಆಹ್ವಾನ!

ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ....
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on: 

ಬೆಂಗಳೂರು: ತಮ್ಮ ಪಕ್ಷದ ಶಾಸಕರಿಗೆ ಹಣದ ಆಮೀಷವೊಡ್ಡಿ ಅವರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಡಿಸಿಎಂ ಪರಮೇಶ್ವರ್ ನಿರಂತರವಾಗಿ ಆರೋಪಿಸುತ್ತಿದ್ದಾರೆ, ಇದೇ ಹೊತ್ತಲ್ಲೆ ಜಲ ಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಚನ್ನಪಟ್ಟಣದ ಬಿಜೆಪಿ ಕಾರ್ಯಕರ್ತರಿಗೆ  ಕಾಂಗ್ರೆಸ್ ಸೇರುವಂತೆ ಆಹ್ವಾನ ನೀಡಿದ್ದಾರೆ.

ಜನವರಿ 1 2019 ರಂದು ಬಹಿರಂಗ ಪತ್ರ ಬರೆದಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್, ಚನ್ನಪಟ್ಟಣದ ಎಲ್ಲಾ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಆಹ್ವಾನ ನೀಡಿದ್ದಾರೆ.

ಒಕ್ಕಲಿಗರ ಪ್ರಮುಖ ನಾಯಕ ಸಿ.ಪಿ ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿರುವ  ಶಿವಕುಮಾರ್, ನಮ್ಮ ಮೂಲಕ ರಾಜಕೀಯ ಪ್ರವೇಶಿಸಿ ಒಂದು ಪಕ್ಷದಲ್ಲಿ ನಿಲ್ಲದೇ ಪ್ರತಿ ಬಾರಿಯೂ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚನ್ನಪಟ್ಟಣದ ಹಲವು ಮಂದಿ ಈಗಾಗಲೇ ಯೋಗೇಶ್ವರ್ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಸೇರುವ ಬಯಕೆ ಕೂಡ ವ್ಯಕ್ತ ಪಡಿಸಿದ್ದಾರೆ  ಯಾವಾಗ ಬೇಕಾದರೂ ಅವರಿಗೆ ಕಾಂಗ್ರೆಸ್ ಸೇರಬಹುದು ಎಂದು ಪತ್ರದಲ್ಲಿ ಬರೆದಿದ್ದಾರೆ,

ಸಾಮಾಜಿಕ ನ್ಯಾಯ, ಜಾತ್ಯಾತೀತತೆ, ಕೋಮು ಸೌಹಾರ್ದ, ಎಲ್ಲರನ್ನೂ ಕಾಂಗ್ರೆಸ್ ನಲ್ಲಿ ಸಮಾನತೆಯಿಂದ ಕಾಣಲಾಗುತ್ತದೆ. ನಮ್ಮಲ್ಲಿ ಅನ್ಯಾಯಾ ಎಂಬ ಪದಕ್ಕೆ ಆಸ್ಪದವಿಲ್ಲ. ಸಿಪಿ ಯೋಗೇಶ್ವರ್ ಸೋಲಿಸಲು  ಕಾಂಗ್ರೆಸ್ ಮತ್ತು ಜೆಡಿಸ್ ಒಗ್ಗಟ್ಟಾಗಿ ಹೋರಾಡುತ್ತಿದೆ ಎಂದು ತಿಳಿಸುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com