ಸುಳ್ಳು ಸುದ್ದಿ ಪ್ರಸಾರ ಮಾಡುವ ಮೂಲಕ ಮಾಧ್ಯಮಗಳು ಜನತೆಗೆ ದಿಗಿಲು ಮೂಡಿಸುತ್ತಿವೆ: ಜೆಡಿಎಸ್-ಕಾಂಗ್ರೆಸ್ ಆರೋಪ

ಕಳೆದೆರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಇದೇ ವೇಳೆ ರಾಜಕೀಯ ವಿದ್ಯಮಾನಗಳನ್ನು ಬಿತ್ತರಿಸುತ್ತಿದ್ದ ...
ಎಚ್.ಡಿ ಕುಮಾರಸ್ವಾಮಿ ಮತ್ತು ದಿನೇಶ್ ಗುಂಡೂರಾವ್
ಎಚ್.ಡಿ ಕುಮಾರಸ್ವಾಮಿ ಮತ್ತು ದಿನೇಶ್ ಗುಂಡೂರಾವ್
Updated on: 
ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ಹೈಡ್ರಾಮಾಕ್ಕೆ ತೆರೆ ಬಿದ್ದಿದೆ. ಇದೇ ವೇಳೆ  ರಾಜಕೀಯ ವಿದ್ಯಮಾನಗಳನ್ನು ಬಿತ್ತರಿಸುತ್ತಿದ್ದ ಮಾಧ್ಯಮಗಳ ಮೇಲೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಹರಿ ಹಾಯ್ದಿವೆ.
ನಾವು ಎಲ್ಲಾ ಶಾಸಕರ ಜೊತೆ ಸಂಪರ್ಕದಲ್ಲಿದ್ದೇವೆ, ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ, ಆದರೆ ನನಗೆ ಅರ್ಥವಾಗದ ವಿಷಯ ಏನೇಂದರೇ ಮಾಧ್ಯಮಗಳು ಏಕೆ ಆಧಾರರಹಿತ ವರದಿಗಳನ್ನು ಬಿತ್ತರಿಸಿ ಗಾಬರಿ ಹುಟ್ಟಿಸುವ ಕೆಲಸ ಮಾಡುತ್ತಿವೆ ಎಂದು ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಮಾಧ್ಯಮಗಳು ಏಕೆ ಬಿಜೆಪಿ ಮಾಡುತ್ತಿರುವ ಕೆಲಸವನ್ನು ಹೈಲೈಟ್ ಮಾಡುತ್ತಿಲ್ಲ, ಬಿಜೆಪಿಯವರು ಮಾಡುತ್ತಿರುವ ಕುದುರೆ ವ್ಯಾಪಾರವನ್ನು ಏಕೆ ಪ್ರಶ್ನಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.
ಕುದುರೆ ವ್ಯಾಪಾರದಲ್ಲಿ ಮುಳುಗಿರುವ ಬಿಜೆಪಿ, ಕೇಂದ್ರದ ಸಂಸ್ಥೆಗಳಾದ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com