ಈ ಹಿಂದೆಯೂ ಸಹ ತಮಗೆ ನೀಡಿರುವ ಖಾತೆ ಬಗ್ಗೆ ಸಚಿವ ವೆಂಕಟರಮಣಪ್ಪ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಮಿಕ ಖಾತೆಯನ್ನು ಇಟ್ಟುಕೊಂಡು ನಾನೇನು ಮಾಡಲಿ ? ತಮಗೂ ಪ್ರಭಾವಿ ಖಾತೆ ನೀಡದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಕಾರ್ಮಿಕ ಖಾತೆಯಲ್ಲಿ ಇಟ್ಟುಕೊಂಡರೂ ಏನೂ ಕೆಲಸ ಆಗುವುದಿಲ್ಲ, ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ನನಗೆ ಬೇರೆ ಯಾವುದಾದರೂ ಪ್ರಭಾವಿ ಖಾತೆ ಕೊಡುವುದಾದರೆ ಕೊಡಲಿ. ಇಲ್ಲದಿದ್ದರೆ ನನ್ನ ದಾರಿ ನನಗೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ ಇವರ ಎಚ್ಚರಿಕೆಗೆ ಯಾರೂ ಸಹ ಸ್ಪಂದಿಸಲಿಲ್ಲ, ಸಚಿವರೂ ರಾಜೀನಾಮೆ ನೀಡಿರಲಿಲ್ಲ, ಈಗ ಮತ್ತೊಮ್ಮೆ ನೀರಿಗಾಗಿ ರಾಜೀನಾಮೆ ಬೆದರಿಕೆ ಹಾಕಿರುವುದು ಸರ್ಕಾರಕ್ಕೆ ತಲೆನೋವಾಗಿದೆ