ಸಿಕ್ಕ ಅಧಿಕಾರವನ್ನು ನಿಭಾಯಿಸಲಾಗದೆ ಹೆಚ್. ವಿಶ್ವನಾಥ್ ಪಲಾಯನ: ಹಳ್ಳಿ ಹಕ್ಕಿಗೆ ಮತ್ತೆ ಗುಮ್ಮಿದ ಟಗರು

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಕೆ ಕುಮಾರಸ್ವಾಮಿ ನೇಮಕವಾದ ಬೆನ್ನಲ್ಲೇ, ಒಂದು ಕಾಲದಲ್ಲಿ ಆಪ್ತರಾಗಿ ಕಾಲ ಕ್ರಮೇಣ ದೂರವಾಗಿದ್ದ ಹೆಚ್ . ವಿಶ್ವನಾಥ್ ವಿರುದ್ಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು:  ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಹೆಚ್ ಕೆ ಕುಮಾರಸ್ವಾಮಿ ನೇಮಕವಾದ ಬೆನ್ನಲ್ಲೇ, ಒಂದು ಕಾಲದಲ್ಲಿ ಆಪ್ತರಾಗಿ ಕಾಲ ಕ್ರಮೇಣ ದೂರವಾಗಿದ್ದ ಹೆಚ್ . ವಿಶ್ವನಾಥ್ ವಿರುದ್ಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ,ತಮಗೆ ಸಿಕ್ಕ ಅಧ್ಯಕ್ಷ ಹುದ್ದೆಯನ್ನು ಸರಿಯಾಗಿ 6 ತಿಂಗಳು ಕೂಡಾ ನಿಭಾಯಿಸಲಾಗದೆ, ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿರುವ ಹೆಚ್ . ವಿಶ್ವನಾಥ್ ಸದಾ ಇತರರ ಸಾಮರ್ಥ್ಯವನ್ನು ಪ್ರಶ್ನಿಸುತ್ತಾ ತಮ್ಮ ದೌರ್ಬಲ್ಯವನ್ನು ಮರೆ ಮಾಚಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಅಲ್ಲದೇ, ವಿಶ್ವನಾಥ್ ಬಗ್ಗೆ ತಮ್ಮಗೆ ಅನುಕಂಪವಿದೆ ಎಂದು ಹೇಳುವ ಮೂಲಕ ವಿಶ್ವನಾಥ್ ಅವರ ಕಾಲೆಳೆದಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ವಿಶ್ವನಾಥ್, ಸಮ್ಮಿಶ್ರ ಸರ್ಕಾರ ಮುಂದುವರೆಸುವ ಆಸಕ್ತಿ ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದೆನಿಸುತ್ತಿದೆ. ರಾಜ್ಯದ ಜನರೂ ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಕೊರತೆ ಇದೆ. ರಾಜ್ಯ ರಾಜಕಾರಣ ಅಧೋಗತಿಗೆ ಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com