ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಶನಿವಾರ ನಡೆಯುತ್ತಿರುವ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಹಲವು ಶಾಸಕರು ರಾಜೀನಾಮೆ ನೀಡುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಸ್ಪೀಕರ್ ರಮೇಶ್ ಕುಮಾರ್ ಗರಂ ಆದ ಪ್ರಸಂಗ ನಡೆದಿದೆ.
ಸ್ಪೀಕರ್ ರಮೇಶ್ ಕುಮಾರ್ ಅವರ ಆಪ್ತರು ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದು ಅವರನ್ನು ಕಂಡು ಆರೋಗ್ಯ ವಿಚಾರಿಸಿಕೊಂಡು ಬರಲೆಂದು ರಮೇಶ್ ಕುಮಾರ್ ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಸುದ್ದಿ ವಾಹಿನಿ ಪ್ರತಿನಿಧಿಗಳು ಶಾಸಕರ ರಾಜೀನಾಮೆ ವಿಚಾರ ಕೇಳಿದರು.
ಕಾರಿನಿಂದ ಇಳಿಯುತ್ತಲೇ ಗರಂ ಆದ ಸ್ಪೀಕರ್ ರಮೇಶ್ ಕುಮಾರ್ ನಾನು ಮನುಷ್ಯ ಅಲ್ವಾ, ನಾನಿಲ್ಲಿ ಬಂದಿರುವುದು ಒಬ್ಬರ ಆರೋಗ್ಯ ವಿಚಾರಿಸಲಿಕ್ಕೆ, ನಿಮಗೆ ನ್ಯೂಸ್ ಮುಖ್ಯ ಆಗತ್ತೆ, ಮನುಷ್ಯರಾ ನೀವು, ಇಲ್ಲಿಂದ ಹೊರಟು ಹೋಗಿ ಎಂದು ಬೈದು ಹೋದರು.