ಬಿ ಎಸ್ ಯಡಿಯೂರಪ್ಪ
ರಾಜಕೀಯ
ಕ್ರಮಬದ್ಧವಾದ ರಾಜೀನಾಮೆ ಪತ್ರ ಅಂಗೀಕಾರಕ್ಕೆ ವಿಳಂಬ: ಸ್ಪೀಕರ್ ನಡೆಗೆ ಯಡಿಯೂರಪ್ಪ ಗರಂ
ಶಾಸಕರು ನೀಡಿರುವ ಕ್ರಮ ಬದ್ದ ರಾಜೀನಾಮೆಯನ್ನು ತಕ್ಷಣವೇ ಒಪ್ಪಿಕೊಳ್ಳುವುದನ್ನು ...
ಬೆಂಗಳೂರು: ಅತೃಪ್ತ ಶಾಸಕರು ನೀಡಿರುವ ಕ್ರಮ ಬದ್ದ ರಾಜೀನಾಮೆಯನ್ನು ತಕ್ಷಣವೇ ಒಪ್ಪಿಕೊಳ್ಳುವುದನ್ನು ಬಿಟ್ಟು ಸ್ಪೀಕರ್ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಬದ್ದವಾಗಿರುವ ರಾಜೀನಾಮೆಯನ್ನು ತಕ್ಷಣ ಒಪ್ಪಿಕೊಳ್ಳಬೇಕು.ಏಕೆ ಸ್ಪೀಕರ್ ರಮೇಶ್ ಕುಮಾರ ವಿಳಂಬ ಮಾಡುತ್ತಿದ್ದಾರೆ ಗೊತ್ತಿಲ್ಲ, ಸರ್ವಾನುಮತದಿಂದ ಆಯ್ಕೆಗೊಂಡ ಸ್ಪೀಕರ್ ಈ ರೀತಿ ಏಕೆ ಮಾಡುತ್ತಿದ್ದಾರೋ ತಿಳಿದಿಲ್ಲ.ರಾಜೀನಾಮೆ ಪತ್ರ ಕ್ರಮಬದ್ದವಾಗಿಲ್ಲದವರು ಬಂದು ಮತ್ತೊಮ್ಮೆ ರಾಜೀನಾಮೆ ಪತ್ರ ಕೊಡುತ್ತಾರೆ ಕ್ರಮಬದ್ದವಾಗಿ ಇರುವ ರಾಜೀನಾಮೆ ಅಂಗೀಕಾರಕ್ಕೆ ಏನು ಸಮಸ್ಯೆ ಎಂದು ಸ್ಪೀಕರ್ ನಡೆಯನ್ನು ಯಡಿಯೂರಪ್ಪ ಟೀಕಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ