ಸರ್ಕಾರಿ ಎಂಜಿನಿಯರ್ ಗಳಿಂದ ರೇವಣ್ಣ 500 ಕೋಟಿ ಲಂಚ ಸ್ವೀಕಾರ- ಬಿಜೆಪಿ ಆರೋಪ

ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂಜಿನಿಯರಿಂಗ್ ಗಳಿಗೆ ಮುಂಬಡ್ತಿ ನೀಡುವುದಕ್ಕಾಗಿ ಲೋಕೋಪಯೋಗಿ ಸಚಿವ ಎಚ್. ಡಿ . ರೇವಣ್ಣ ಸುಮಾರು 500 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ
ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ
ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಸೇರಿದ ಎಂಜಿನಿಯರಿಂಗ್ ಗಳಿಗೆ ಮುಂಬಡ್ತಿ ಹಾಗೂ ವರ್ಗಾವಣೆಗಾಗಿ  ಲೋಕೋಪಯೋಗಿ ಸಚಿವ ಎಚ್. ಡಿ . ರೇವಣ್ಣ   ಸುಮಾರು 500 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ರಾಜ್ಯಪಾಲರಿಗೆ ಪತ್ರ ಬರೆದಿರುವ ಬಿಜೆಪಿ, ಜುಲೈ 1ರಿಂದ  ಜುಲೈ 10 ರ ನಡುವೆ ಸರ್ಕಾರಿ ಎಂಜಿನಿಯರ್ ಗಳ ಬಡ್ತಿ ಅಥವಾ ವರ್ಗಾವಣೆಗಾಗಿ ರೇವಣ್ಣ ಸುಮಾರು 500 ಕೋಟಿ ರೂಪಾಯಿ ಲಂಚ ಪಡೆದಿದ್ದು, ಈ ಆದೇಶವನ್ನು  ರಾಜ್ಯಪಾಲರು ಅನುಮೋದಿಸದಂತೆ ಒತ್ತಾಯಿಸಿದೆ.
ಲೋಕೋಪಯೋಗಿ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯಲ್ಲಿನ  ತಮ್ಮ ಜಾತಿಗೆ ಸೇರಿದ 800 ಎಂಜಿನಿಯರ್ ಗಳಿಗೆ ಮುಂಬಡ್ತಿ ನೀಡುವಂತೆ ರೇವಣ್ಣ, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ  ಕೃಷ್ಣ ರೆಡ್ಡಿ ಅವರಿಗೆ ನಿರ್ದೇಶ ನೀಡಿದ್ದಾರೆ. ಅವರಿಂದ ಕೊಟ್ಯಂತರ ರೂಪಾಯಿ ಲಂಚವನ್ನು ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.
ರೇವಣ್ಣ  ನೈಜ ಮುಖ್ಯಮಂತ್ರಿಯಾಗಿದ್ದು, ಲಂಚಕ್ಕಾಗಿ  ಅಕ್ರಮವಾಗಿ ಎಲ್ಲಾ ಇಲಾಖೆಗಳಲ್ಲಿನ ಅಧಿಕಾರಿಗಳನ್ನು ಮುಂಬಡ್ತಿ ಅಥವಾ ವರ್ಗಾವಣೆ ಮಾಡಿಸುತ್ತಿದ್ದಾರೆ. ಈ ಆದೇಶವನ್ನು ತಡೆ ಹಿಡಿಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com