ವಿಶ್ವಾಸಮತಕ್ಕೆ ಬಿಜೆಪಿಯೂ ಸಿದ್ಧವಿದೆ, ಆದರೆ ಜು.15 ರಂದೇ ಆಗಬೇಕು: ಯಡಿಯೂರಪ್ಪ

ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದು ಜು.15 (ಸೋಮವಾರದಂದೇ) ಸದನದಲ್ಲಿ ಈ ಪ್ರಕ್ರಿಯೆ ನಡೆಸಬೇಕೆಂದು ವಿಪಕ್ಷ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ವಿಶ್ವಾಸಮತಕ್ಕೆ ಬಿಜೆಪಿಯೂ ಸಿದ್ಧವಿದೆ, ಆದರೆ ಜು.15 ರಂದೇ ಆಗಬೇಕು: ಯಡಿಯೂರಪ್ಪ
ವಿಶ್ವಾಸಮತಕ್ಕೆ ಬಿಜೆಪಿಯೂ ಸಿದ್ಧವಿದೆ, ಆದರೆ ಜು.15 ರಂದೇ ಆಗಬೇಕು: ಯಡಿಯೂರಪ್ಪ
Updated on
ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತಯಾಚನೆಗೆ ಮುಂದಾಗಿದ್ದು ಜು.15 (ಸೋಮವಾರದಂದೇ) ಸದನದಲ್ಲಿ ಈ ಪ್ರಕ್ರಿಯೆ ನಡೆಸಬೇಕೆಂದು ವಿಪಕ್ಷ ನಾಯಕ ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಬಹುಮತವನ್ನು ಕಳೆದುಕೊಂಡಿದ್ದು ಸರ್ಕಾರದ ಪತನ ನಿಶ್ಚಿತವಾಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
16 ಶಾಸಕರು ರಾಜೀನಾಮೆ ನೀಡಿದ್ದು, ಸೋಮವಾರದಂದೇ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಬೇಕು, ಮುಖ್ಯಮಂತ್ರಿಗಳು ಬದ್ಧತೆಯನ್ನು ಪೂರೈಸಬೇಕೆಂದು ಸೋಮವಾರ ನಡೆಯಲಿರುವ ವ್ಯವಹಾರ ಸಲಹಾ ಸಮಿತಿಯಲ್ಲಿ ಒತ್ತಾಯಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com