ಆಸ್ಪತ್ರೆಗೆ ದಾಖಲಾಗಿರುವ ಶಾಸಕ ಶ್ರೀಮಂತ್ ಪಾಟೀಲ್ ಬಗ್ಗೆ ವರದಿ ಕೇಳಿದ ಸ್ಪೀಕರ್

ಶ್ರೀಮಂತ್ ಪಾಟೀಲ್ ಕುಟುಂಬ ಸದಸ್ಯರನ್ನು ಸಂಪರ್ಕಿಸಿ, ನಾಳೆಯೊಳಗೆ ನನ್ನಗೆ ಮಾಹಿತಿ ನೀಡಿ ಒಂದು ವೇಳೆ ಗೃಹ ಸಚಿವರು ರಕ್ಷಣೆ ನೀಡದಿದ್ದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡುತ್ತೇನೆ ಎಂದು ರಮೇಶ್ ಕುಮಾರ್ ತಿಳಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿಶ್ವಾಸಮತ ನಿರ್ಣಯ ಕುರಿತ ಚರ್ಚೆ ವೇಳೆಯಲ್ಲಿ  ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಆಸ್ಪತ್ರೆಗೆ ದಾಖಲಾಗಿರುವ ಹಿಂದೆ ಪಿತೂರಿ ಅಡಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಇಂದು ಹೇಳಿದರು.
ಕಾಂಗ್ರೆಸ್ ಶಾಸಕರು ತಂಗಿದ್ದ ಪ್ರಕೃತಿ ರೆಸಾರ್ಟ್ ಬಳಿಯಲ್ಲಿಯೇ ಆಸ್ಪತ್ರೆ ಇದೆ. ಆದಾಗ್ಯೂ ಶಾಸಕ ಶ್ರೀಮಂತ್ ಪಾಟೀಲ್ ಏಕೆ  ಚಿಕಿತ್ಸೆ ನೆಪದಲ್ಲಿ ಚೆನ್ನೈ ಹಾಗೂ ಮುಂಬೈಗೆ ಹಾರಿದ್ದಾರೆ  ಎಂದು ಪ್ರಶ್ನಿಸಿದರು. ಅವರು ಆರೋಗ್ಯದಿಂದ ಇದ್ದಾರೆ , ಆದರೆ, ಇದರಲ್ಲಿ ಬಿಜೆಪಿಯ ಕುತಂತ್ರವಿದೆ ಎಂದು ಆರೋಪಿಸಿದರು.
ಶ್ರೀಮಂತ್ ಪಾಟೀಲ್ ಅನಾರೋಗ್ಯ ಸಂಬಂಧ ಬಂದಿರುವ ಕಾಗದ ಪತ್ರ ಕಂಡು ಕೆಂಡಮಂಡಲರಾದ ಸ್ಪೀಕರ್ ರಮೇಶ್ ಕುಮಾರ್,  ದಿನಾಂಕ ಅಥವಾ ಲೆಟರ್ ಹೆಡ್ ಹೊಂದಿಲ್ಲದ ದಾಖಲೆಯನ್ನು ಪರಿಗಣಿಸಿದರೆ ನಾನು ಯಾವ ರೀತಿಯ ಸ್ಪೀಕರ್ ಆಗುತ್ತೇನೆ ಎಂದರು.
ಕೂಡಲೇ ಶ್ರೀಮಂತ್ ಪಾಟೀಲ್ ಕುಟುಂಬ ಸದಸ್ಯರನ್ನು ಸಂಪರ್ಕಿಸಿ, ನಾಳೆಯೊಳಗೆ ನನ್ನಗೆ ಮಾಹಿತಿ ನೀಡಿ ಒಂದು ವೇಳೆ ಗೃಹ ಸಚಿವರು ರಕ್ಷಣೆ ನೀಡದಿದ್ದರೆ ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡುತ್ತೇನೆ ಎಂದು ರಮೇಶ್ ಕುಮಾರ್  ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com