ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ

ಧಾನಸಭೆಯ ಕಲಾಪ ನಿಗದಿಯಂತೆ ಮಂಗಳವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡಾಗ ಆಡಳಿತ ಪಕ್ಷಗಳ...
ಸದನದ ಕಲಾಪದ ಸಾಂದರ್ಭಿಕ ಚಿತ್ರ
ಸದನದ ಕಲಾಪದ ಸಾಂದರ್ಭಿಕ ಚಿತ್ರ
ಬೆಂಗಳೂರು: ವಿಧಾನಸಭೆಯ ಕಲಾಪ ನಿಗದಿಯಂತೆ  ಮಂಗಳವಾರ ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡಾಗ ಆಡಳಿತ ಪಕ್ಷಗಳ ಮೂವರು ಸದಸ್ಯರನ್ನು ಹೊರತುಪಡಿಸಿ ಯಾರೂ ಹಾಜರಾಗದ್ದನ್ನು ಕಂಡ ಸ್ಪೀಕರ್ ರಮೇಶ್ ಕುಮಾರ್ ಗರಂ ಆದ ಘಟನೆ ನಡೆಯಿತು.
ಆಡಳಿತ ಪಕ್ಷದ ಪರವಾಗಿ ಹಾಜರಾಗಿದ್ದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಸದಸ್ಯರು ಬರುವವರಿದ್ದಾರೆ. ಇನ್ನೂ 10-15 ನಿಮಿಷ ಕಾಲಾವಕಾಶ ಕೊಡಿ, ಅಷ್ಟರವರೆಗೆ ಕಲಾಪ ಮುಂದೂಡಿ ಎಂದು ಮನವಿ ಮಾಡಿದರು.
ಇದನ್ನು ತಳ್ಳಿಹಾಕಿದ ಸ್ಪೀಕರ್, ನೀವು ನಿಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತೀರಿ, ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳಿ ಎಂದು ಹೇಳಿದರು.
ಅತೃಪ್ತ ಶಾಸಕರು ಇಂದು ಬೆಳಗ್ಗೆ 11 ಗಂಟೆಗೆ ಖುದ್ದು ಹಾಜರಾಗಬೇಕೆಂದು ಸ್ಪೀಕರ್ ಆದೇಶ ನೀಡಿರುವುದರಿಂದ ಅವರ ಪರ ವಕೀಲರು ವಿಧಾನಸೌಧಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮಾತನಾಡಲು ಸ್ಪೀಕರ್ ರಮೇಶ್ ಕುಮಾರ್ ಸದ್ಯ ವಿಧಾನಸಭೆಯಿಂದ ಎದ್ದು ಹೋಗಿರುವುದರಿಂದ ಅವರ ಸ್ಥಾನದಲ್ಲಿ ಶಾಸಕ ಎ ಟಿ ರಾಮಸ್ವಾಮಿ ಕುಳಿತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com