ಸಿದ್ದರಾಮಯ್ಯ
ರಾಜಕೀಯ
ಸಮಾಜದಲ್ಲಿ ಗುಲಾಮಗಿರಿ :'ಮೇಲ್ವರ್ಗದವರನ್ನ ಏನ್ ಸ್ವಾಮಿ, ಕೆಳವರ್ಗದವರನ್ನ ಏನ್ ಲಾ' ಅಂತ ಮಾತಡಿಸ್ತಾರೆ- ಸಿದ್ದು
ಸಮಾಜದಲ್ಲಿ ಇನ್ನೂ ಗುಲಾಮಗಿರಿ ಮನೆ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಸಮಾಜದಲ್ಲಿ ಇನ್ನೂ ಗುಲಾಮಗಿರಿ ಮನೆ ಮಾಡಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜದಲ್ಲಿ ಮನೆ ಮಾಡಿಕೊಂಡಿರುವ ಇಂತಹ ಗುಲಾಮಗಿರಿಯಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ನಡವಳಿಕೆಗಳ ಮೂಲಕ ಆಗಾಗ ಗುಲಾಮಗಿರಿಯನ್ನು ತೋರಿಸಿಕೊಳ್ಳುತ್ತಾ ಇರುತ್ತೇವೆ ಎಂದಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ನೀಡಿರುವ ಸಿದ್ದರಾಮಯ್ಯ, ಮೇಲ್ವರ್ಗದವರನ್ನು ಕಂಡರೆ ಏನ್ ಸ್ವಾಮಿ ಅಂತ ಮಾತನಾಡಿಸ್ತಾರೆ, ಕೆಳವರ್ಗದವರನ್ನು ಕಂಡರೆ ಏಲ್ ಲಾ ಅಂತ ಮಾತನಾಡಿಸ್ತಾರೆ ಇದೇ. ಗುಲಾಮಗಿರಿ ಎಂದು ಟ್ವೀಟ್ ಮಾಡಿದ್ದಾರೆ.


