ದುರಹಂಕಾರದಿಂದಲೇ ಸೋಲಾಯಿತು: ಸಿಡಿದೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸ್ವಂತ ಪಕ್ಷದ ಮೇಲೆಯೇ ಮುಗಿಬಿದ್ದಿದ್ದು, ಜೆಡಿಎಸ್ ಪಕ್ಷದ ದುರಹಂಕಾರದಿಂದಲೇ ಅದಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ..
ಎಚ್. ವಿಶ್ವನಾಥ್
ಎಚ್. ವಿಶ್ವನಾಥ್
ಮೈಸೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಸ್ವಂತ ಪಕ್ಷದ ಮೇಲೆಯೇ ಮುಗಿಬಿದ್ದಿದ್ದು, ಜೆಡಿಎಸ್ ಪಕ್ಷದ ದುರಹಂಕಾರದಿಂದಲೇ ಅದಕ್ಕೆ ಸೋಲಾಗಿದೆ ಎಂದು ಹೇಳಿದ್ದಾರೆ.
ಕೆ.ಆರ್ ನಗರದಲ್ಲಿ ಮಾತನಾಡಿದ  ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಪಕ್ಷದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ತಾವು ಶಿಫಾರಸ್ಸು ಮಾಡಿ ಒಬ್ಬರಿಗೂ ಕೂಡ ಟಿಕೆಟ್ ನೀಡಿಲ್ಲ ಒಬ್ಬೇ ಒಬ್ಬ ಕುರುಬ ಅಭ್ಯರ್ಥಿಗೆ ಟಿಕೆಟ್ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಜೆಡಿಎಸ್ ವಿರುದ್ಧವೇ ಸಿಡಿದೆದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್. ಕೆ.ಆರ್‌.ನಗರ ಪುರಸಭೆ ಸೋಲಿನ ಹಿನ್ನೆಲೆ ನಡೆದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಕೆ.ಆರ್.ನಗರ ಪುರಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಮ್ಮ ಕುರುಬ ಸಮುದಾಯಕ್ಕೆ ಒಂದೇ ಒಂದು ಟಿಕೆಟ್ ಕೂಡ ನೀಡಿಲ್ಲ. ನಮ್ಮ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದರು.
ನಮ್ಮದೇ ದುರಹಂಕಾರದಿಂದ ಸೋಲಾಗಿದೆ ಎಂದಿರುವ ವಿಶ್ವನಾಥ್, ಜೆಡಿಎಸ್‌ನಲ್ಲಿ ಹಣವೇ ಮುಖ್ಯ, ಕಾರ್ಯಕರ್ತರಿಗೂ ಅಷ್ಟೆ, ನಾಯಕರಿಗೂ ಅಷ್ಟೆ ಎಂದು ಎಲ್ಲರ ಮೇಲೂ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com