• Tag results for ವಿಶ್ವನಾಥ್

ವಿಧಾನ ಪರಿಷತ್ ಗೆ ಆಯ್ಕೆ ಮಾಡುವಂತೆ ವಿಶ್ವನಾಥ್, ಎಂಟಿಬಿ ನಾಗರಾಜ್ ಪಟ್ಟು!

ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ವೈರಸ್, ಲಾಕ್‌ಡೌನ್‌ನಿಂದಾಗಿ ಬಿಜೆಪಿಯಲ್ಲಿ ಕಳೆಗುಂದಿದ್ದ ರಾಜಕೀಯ ಮತ್ತೆ ಶುರುವಾಗಿದೆ. 

published on : 5th June 2020

'ಹೌದು ಬ್ರದರ್ ಕೊರೋನಾ ಬಂದಿದ್ದಳು, ನೋಡಿದೆ ಎನ್ನುತ್ತಿದ್ದರು ಕುಮಾರಸ್ವಾಮಿ'

ರಾಜ್ಯದಲ್ಲಿ ಈ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರವಿದ್ದಿದ್ದರೆ ಕೋವಿಡ್ ಕಾಲದಲ್ಲಿ 50,000 ಜನ ಸಾವನ್ನಪ್ಪಿರುತ್ತಿದ್ದರು. ಏಕೆಂದರೆ ಸಮನ್ವಯವಿಲ್ಲದ ಸಮ್ಮಿಶ್ರ ಸರ್ಕಾರವಿರುತ್ತಿತ್ತು ಎಂದು‌ ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.

published on : 4th June 2020

ಅಸಮಾಧಾನವೇನಿದ್ದರೂ ಅಂತರಂಗದಲ್ಲಿರಲಿ: ಪ್ರತಾಪ್ ಸಿಂಹ- ರಾಮದಾಸ್ ಗೆ ವಿಶ್ವನಾಥ್ ಸಲಹೆ

  ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್​ ಸಿಂಹ ವಾಕ್ಸಮರ  ಬಹಿರಂಗವಾಗಿ ಬೇಡ ಅಂತರಂಗದಲ್ಲಿ ಇರಲಿ. ನಿಮ್ಮ ಅಸಮಾಧಾನ ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಇರಲಿ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಸಲಹೆ ನೀಡಿದ್ದಾರೆ.

published on : 13th May 2020

ಪಾದರಾಯನಪುರ ಗಲಾಟೆ: ಆರೋಪಿಗಳಿಗೆ ಐಷರಾಮಿ ಹೋಟೆಲ್ ಕ್ವಾರಂಟೈನ್ ಸರಿಯಲ್ಲ- ಎಸ್. ಆರ್. ವಿಶ್ವನಾಥ್ ಕಿಡಿ

ದೇಶದಲ್ಲಿ ಅರ್ಧಭಾಗಕ್ಕೆ  ಕೊರೋನಾ ವೈರಸ್ ಹರಡಿಸಿದ ತಬ್ಲೀಘಿಗಳು  ದೇಶದ್ರೋಹಿಗಳು. ಅವರೊಂದಿಗೆ ಸಂಪರ್ಕ ಹೊಂದಿದವರಿಗೆ ಯಾವುದೇ ರೀತಿಯ ವೈಭೋಗದ ಸೌಲಭ್ಯಗಳನ್ನು ನೀಡಬಾರದೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಕಿಡಿಕಾರಿದ್ದಾರೆ

published on : 25th April 2020

ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರನ್ನು ರಕ್ಷಿಸಿ: ಪ್ರಧಾನಿಗೆ ಎಚ್‌.ವಿಶ್ವನಾಥ್‌ ಪತ್ರ

ಕೊರೊನಾದಿಂದಾಗಿ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿಗೆ ಬರಸಿಡಿಲು ಬಡಿದಂತಾಗಿದ್ದು, ಕೂಡಲೇ ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಮಾಜಿ ಸಚಿವ ಅಡಗೂರು ಎಚ್‌.ವಿಶ್ವನಾಥ್‌ ಆಗ್ರಹಿಸಿದ್ದಾರೆ.

published on : 15th April 2020

ಇಷ್ಟ ಬಂದಂತೆ ಆದೇಶ ಮಾಡಿ, ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸಬಾರದು: ವಿಶ್ವನಾಥ್

ಸರ್ಕಾರ ದಿನಕ್ಕೊಂದು ಆದೇಶ ಹೊರಡಿಸಬಾರದು, ಇಷ್ಟ ಬಂದಂತೆ ಆದೇಶ ಮಾಡಬಾರದು ಮಾಜಿ ಸಚಿವ ಎಚ್ ವಿಶ್ವನಾಥ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

published on : 27th March 2020

ನಿಖಿಲ್ ದುಬಾರಿ ಮದುವೆ: ಹಿತೈಷಿಗಳಿಗೆ ಆತಿಥ್ಯ ಕೊಡುವುದೂ ದುಂದುವೆಚ್ಚವೇ?: ವಿಶ್ವನಾಥ್'ಗೆ ಕುಮಾರಸ್ವಾಮಿ ತಿರುಗೇಟು

ರಾಜ್ಯದಲ್ಲಿ ತಮ್ಮನ್ನು ಹಾಗೂ ತಮ್ಮ ಕುಟುಂಬದವರನ್ನು ಬೆಳೆಸಿದವರಿಗೆ ಹಾಗೂ ಅಭಿಮಾನಿಗಳಿಗೆ, ಹಿತೈಷಿಗಳಿಗೆ ಆತಿಥ್ಯ ಕೊಡುವುದು ದುಂದುವೆಚ್ಚವೇ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

published on : 7th March 2020

ರಾಜ್ಯದ ಈ ಯುವಕನ ಪಾಲಿಗೆ ದೇವತಾ ಮನುಷ್ಯನಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ನಗರದ ಈ ಕೊಳಗೇರಿ ನಿವಾಸಿಯೊಬ್ಬರ ಪಾಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವತಾ ಮನುಷ್ಯರಾಗಿದ್ದಾರೆ. 

published on : 13th February 2020

ಬಿಜೆಪಿ ಸರ್ಕಾರ ಬರಲು ಯೋಗೇಶ್ವರ್ ತ್ಯಾಗ ಇಲ್ಲ:  ಎಂಟಿಬಿ ನಾಗರಾಜ್​ಗೆ ಕೊಡಿ!

ಬಿಜೆಪಿ ಸರ್ಕಾರ ಬರಲು ಸಿಪಿ ಯೋಗೇಶ್ವರ್ ತ್ಯಾಗ ಇಲ್ಲ. ಅವರಿಗೆ ಯಾಕೆ ಮಂತ್ರಿ ಸ್ಥಾನ ನೀಡಬೇಕು. ತ್ಯಾಗ ಮಾಡಿರುವ ಎಂಟಿಬಿ ನಾಗರಾಜ್​ಗೆ ಕೊಡಬೇಕು ಎಂದು ಮಾಜಿ ಸಚಿವ ಎಚ್​. ವಿಶ್ವನಾಥ್​ ಕುಟುಕಿದ್ದಾರೆ.

published on : 5th February 2020

ಹಳ್ಳಿಹಕ್ಕಿ ಯಾರು ಗೊತ್ತಿಲ್ಲ ಎಂದ ಸಿದ್ದರಾಮಯ್ಯ

ಹಳ್ಳಿಹಕ್ಕಿ ಯಾರು ಎನ್ನುವುದು ನನಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ವಿಶ್ವನಾಥರ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ

published on : 4th February 2020

ಸಂಪುಟ ವಿಸ್ತರಣೆ ಸಂಕಟ: ಸಿಎಂ ಮುಂದೆ  ಬೆಟ್ಟದಷ್ಟು ಸವಾಲು; ಹಳ್ಳಿಹಕ್ಕಿ ಮನವೊಲಿಕೆ? 

ಸಂಪುಟ ವಿಸ್ತರಣೆ ವಿಚಾರದಲ್ಲಿ ಅಸಮಾಧಾನಗೊಂಡಿರುವ  ಬಿಜೆಪಿಯ ಶಾಸಕರ ಜೊತೆ ಮುಖ್ಯಮಂತ್ರಿ ದೂರವಾಣಿ ಮೂಲಕ ಮಾತುಕತೆ ನಡೆಸಿ ಅಸಮಾಧಾನ ತಣಿಸುವ ಪ್ರಯತ್ನ ನಡೆಸುತ್ತಿದ್ದಾರೆ.

published on : 3rd February 2020

ಬಿಜೆಪಿ ಅಧಿಕಾರಕ್ಕೆ ತರಲು ವಿಶ್ವನಾಥ್, ಎಂಟಿಬಿ ಮಾಡಿದ ತ್ಯಾಗವನ್ನು ಯಡಿಯೂರಪ್ಪ ಮರೆಯಲ್ಲ: ಸೋಮಣ್ಣ

ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ವಿಶ್ವನಾಥ್ ಹಾಗೂ ಎಂಟಿ ನಾಗರಾಜ್ ಅವರ ತ್ಯಾಗವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿರುವ ವಸತಿ ಸಚಿವ ವಿ.ಸೋಮಣ್ಣ, ಮುಂದಿನ ವರ್ಷ ಸಚಿವ ಸಂಪುಟ ಪರಿಷ್ಕರಣೆ ವೇಳೆ ಮತ್ತಷ್ಟು ಜನರಿಗೆ ಅವಕಾಶ ದೊರೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. 

published on : 3rd February 2020

ಸಂಪುಟ ವಿಸ್ತರಣೆ: ಯಡಿಯೂರಪ್ಪ ಮೇಲೆ ವಿಶ್ವಾಸ ಇಟ್ಟ ಎಂಟಿಬಿ, ವಿಶ್ವನಾಥ್

ಉಪಚುನಾವಣೆಯಲ್ಲಿ ಸೋಲಿನ ಕಹಿ ಅನುಭವಿಸಿದ ಕಾಂಗ್ರೆಸ್ ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು, ಸಚಿವ ಸಂಪುಟ ಸ್ಥಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. 

published on : 3rd February 2020

ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಲು ಕಾನೂನು ತೊಡಕಿದೆ- ಸಚಿವ ಮಾಧುಸ್ವಾಮಿ

ವಿಧಾನಸಭಾ ಉಪ ಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡಬೇಕೋ ಬೇಡವೋ ಅನ್ನೋ‌ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

published on : 3rd February 2020

ನಾನು ಸಚಿವನಾಗದಿದ್ದರೆ ಆಕಾಶ ಬಿದ್ದು ಹೋಗುವುದಿಲ್ಲ: ಎಚ್ ವಿಶ್ವನಾಥ್ ಅಸಹಾಯಕ ನುಡಿ

ನಾನು ಮಂತ್ರಿ ಆಗಲೇಬೇಕು ಎಂದು ಆಸೆ ಇಟ್ಟುಕೊಂಡಿದ್ದವನಲ್ಲ. ಮಂತ್ರಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದ್ದರು. ಒಂದು ವೇಳೇ ತಾವು ಸಚಿವನಾಗದಿದ್ದರೂ ಆಕಾಶ ಬಿದ್ದುಹೋಗುವುದಿಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.

published on : 2nd February 2020
1 2 3 4 5 6 >