ಅಧಿಕಾರಿಗಳ ವರ್ಗಾವಣೆ: ಆಯಕಟ್ಟಿನ ಜಾಗಗಳಿಗೆ ಜೆಡಿಎಸ್ ಕುಟುಂಬದ ಆಪ್ತರು!

ಇತ್ತೀಚೆಗೆ ನಡೆದ ರಾಜ್ಯ ಸರ್ಕಾರದ ಹಲವು ವಿಭಾಗಗಳ ಅಧಿಕಾರಿಗಳ ವರ್ಗಾವಣೆಯಿಂದಾಗಿ ಮತ್ತೆ ಮೈತ್ರಿ ಪಕ್ಷಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ,...
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ
Updated on
ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯ ಸರ್ಕಾರದ ಹಲವು ವಿಭಾಗಗಳ ಅಧಿಕಾರಿಗಳ ವರ್ಗಾವಣೆಯಿಂದಾಗಿ ಮತ್ತೆ ಮೈತ್ರಿ ಪಕ್ಷಗಳಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ, ಎಲ್ಲಾ ಆಯಕಟ್ಟಿನ ಜಾಗಗಳಿಗೆ ತಮೆಗೆ ಬೇಕಾದ ಅಧಿಕಾರಿಗಳನವ್ನು ದೇವೇಗೌಡರ ಕುಟುಂಬ ಶಿಫ್ಟ್ ಮಾಡಿಸಿಕೊಂಡಿದೆ.
ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಅವರನ್ನು ವೈದ್ಯಕೀಯ ಇಲಾಖೆಗೆ ಶಿಫ್ಟ್ ಮಾಡಲಾಗಿದೆ. ಅದರ ಜೊತೆಗೆ ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿ ಮತ್ತು ಜಲಸಂಪನ್ಮೂಲ ಇಲಾಖೆಯ ಇನ್ ಚಾರ್ಜ್ ಕೂಡ ನೀಡಲಾಗಿದೆ.
ರಾಕೇಶ್ ಸಿಂಗ್ ಎತ್ತಂಗಡಿಯಿಂದಾಗಿ ಶಾಸಕ ಸಿ.ಸೋಮಶೇಖರ್  ಕ್ಯಾಂಪ್ ಗೆ ಗೆಲುವು ಸಿಕ್ಕಂತಾಗಿದೆ.ರಾಕೇಶ್ ಸಿಂಗ್ ದೇವೇಗೌಡರ ಕುಟುಂಬದ ಆಪ್ತರಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಸೋಮಶೇಖರ್ ಗರಂ ಆಗಿದ್ದರು. ಈ ಸಂಬಂಧ ಹಲವು ಬಾರಿ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಅವಲತ್ತು ಕೊಂಡಿದ್ದರು. 
ರಾಕೇಶ್ ಸಿಂಗ್ ಬಿಡಿಎಯಿಂದ ಹೊರಬಂದರು ಅವರಿಗೆ ಮತ್ತೆರಡು ಪ್ರಬಲ ಇಲಾಖೆಗಳ ಜವಾಬ್ದಾರಿ ನೀಡಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com