ಮಂಡ್ಯ: ನನ್ನ ಬಗ್ಗೆ ಹರಡುತ್ತಿರುವ ಇಲ್ಲ ಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ, ಸ್ಪರ್ಧೆ ವಿಚಾರದಲ್ಲಿ ಮಂಡ್ಯ ಕ್ಷೇತ್ರವನ್ನು ಹೊರತು ಪಡಿಸಿ ಬೇರೆ ಆಯ್ಕೆಯೇ ಇಲ್ಲ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ,
ನಾಗಮಂಗಲದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸುಮಲತಾ, ಕೆಲ ಕಾಂಗ್ರೆಸ್ ನಾಯಕರು ಬೆಂಗಳೂರು ಉತ್ತರ ಅಥವಾ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವಂಸೆ ಸಲಹೆ ನೀಡಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಸ್ಪರ್ದಿಸುವುದು ಬೇಡವೆಂದು ಹೇಳುತ್ತಿರುವ ಅವರು ನನಗೆ ಹುದ್ದೆ ನೀಡುವುದಾಗಿ ಹೇಳಿದ್ದಾರೆಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಮೇಲೆ ಗೌರವವಿರುವುದರಿಂದಲೇ ನಾಯಕರ ಮೂಲಕ ಮಂಡ್ಯ ಕ್ಷೇತ್ರಕ್ಕೆ ಬೇಡಿಕೆ ಇಟ್ಟಿದ್ದೇನೆ. ಹೈಕಮಾಂಡ್ ಟಿಕೆಟ್ ನೀಡದಿದ್ದಾಗ ನಾನು ಜನರ ತೀರ್ಮಾನಕ್ಕೆ ಬದ್ಧನಾಗಲೇಬೇಕಾಗುತ್ತದೆ.
ಅಂಬರೀಷ್ ಎರಡು ಬಾರಿ ಸಚಿವರಾಗಿದ್ದವರು, ಯಾವುದೋ ಆಸೆ ಇಟ್ಟುಕೊಂಡು ನಾನು ಸ್ಪರ್ದೆ ಬಯಸುತ್ತಿಲ್ಲ, ಮಂಡ್ಯ ಜನರ ಋಣ ತೀರಿಸಲು ಬಯಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕರಾದ ಎನ್ ಚಲುವರಾಯ ಸ್ವಾಮಿ, ಜಿ ಮಾದೇಗೌಡ ಮತ್ತು ಆತ್ಮಾನಂದ ಅವರ ಮನೆಗೆ ತೆರಳಿ ಅವರ ಜೊತೆ ಚರ್ಚೆ ನಡೆಸಿದರು.
ಇನ್ನೂ ಸುಮಲತಾ ಕಾಂಗ್ರೆಸ್ ನಿಂದ ಸ್ಪರ್ಧಿಸಿದರೇ ಸಂಪೂರ್ಣ ಬೆಂಬಲ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಜಿ, ಮಾದೇಗೌಡ ಹೇಳಿದ್ದಾರೆ.