ಮೈತ್ರಿ ಧರ್ಮದ ಪ್ರಕಾರ, ಮಂಡ್ಯದಲ್ಲಿ ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುತ್ತದೆಯೋ ಅದಕ್ಕೆ ನಮ್ಮ ಬೆಂಬಲ ಇರಬೇಕು. ಅವರು ಸುಮಲತಾರನ್ನೇ ಅಭ್ಯರ್ಥಿ ಮಾಡಲಿ ಅಥವಾ ಬೇರೆಯವರನ್ನೇ ಕಣಕ್ಕಿಳಿಸಲಿ, ಅವರನ್ನು ನಾವು ಬೆಂಬಲಿಸಬೇಕು. ಹೈಕಮಾಂಡ್ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಅಭ್ಯರ್ಥಿ ಆಯ್ಕೆಯನ್ನು ನಾವು ಪ್ರಶ್ನಿಸುವಂತಿಲ್ಲ. ಇಲ್ಲಿ ಯಾವ ಪಕ್ಷಕ್ಕೆ ಅನುಕೂಲ ಅಥವಾ ಯಾವ ಪಕ್ಷಕ್ಕೆ ಅನಾನುಕೂಲ ಎಂದು ಚರ್ಚೆ ಅನಗತ್ಯ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಾವು ನಡೆಯೋಣ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.