ಸುಮಲತಾ ಅಂಬರೀಷ್ ಮತ್ತು ಎಸ್, ಎಂ ಕೃಷ್ಣ,
ರಾಜಕೀಯ
ಆಶೀರ್ವಾದ ಪಡೆಯಲು ಬಂದಿರುವೆ: ಎಸ್ ಎಂ ಕೃಷ್ಣ ಭೇಟಿ ನಂತರ ಸುಮಲತಾ ಹೇಳಿಕೆ
ನಟಿ ಸುಮಲತಾ ಅಂಬರೀಷ್ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಇಂದು ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿದರು...
ಬೆಂಗಳೂರು: ನಟಿ ಸುಮಲತಾ ಅಂಬರೀಷ್ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಇಂದು ಸದಾಶಿವನಗರದ ಮನೆಯಲ್ಲಿ ಭೇಟಿ ಮಾಡಿದರು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ, ಹಿರಿಯರಾದ ಎಸ್ ಎಂ ಕೃಷ್ಣ ಅವರ ಆಶೀರ್ವಾದ ಪಡೆಯಲು ಬಂದಿರುವೆ, ಮಂಡ್ಯದ ಪರಿಸ್ಥಿತಿಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೇನೆ, ನಾನು ಯಾರ ಬಗ್ಗೆಯೂ ವ್ಯಕ್ತಿಗತವಾಗಿ ಚರ್ಚೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕೃಷ್ಣ ಅವರನ್ನು ಭೇಟಿಯಾಗಿದ್ದು ನನಗೆ ನೆಮ್ಮದಿ ತಂದಿದೆ ಎಂದು ಹೇಳಿದ್ದಾರೆ.
ಪಕ್ಷೇತರವಾಗಿ ಸ್ಪರ್ಧಿಸಬೇಕೋ ಅಥವಾ ಪಕ್ಷಕ್ಕೆ ಸೇರ್ಪಡೆಗೊಂಡು ಸ್ಪರ್ಧಿಸಬೇಕೋ ಎಂಬ ಬಗ್ಗೆ ಮಾರ್ಚ್ 18 ರಂದು ತಿಳಿಸುವುದಾಗಿ ಸುಮಲತಾ ಹೇಳಿದ್ದಾರೆ.
ಇನ್ನೂ ಇದೇ ವೇಳೆ ಮಾತನಾಡಿದ ಎಸ್ ಎಂ ಕೃಷ್ಣ, ಸುಮಲತಾ ಅವರು ತಮ್ಮ ನಿಲುವು ಪ್ರಕಟಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ