ಸುಮಲತಾಗೆ 'ಕೈ' ಕಾರ್ಯಕರ್ತರ ಬೆಂಬಲ: ಬೆಚ್ಚಿಬಿದ್ದ ಜೆಡಿಎಸ್; ಕಾಂಗ್ರೆಸ್ ನಾಯಕರಿಗೆ ಸಾ.ರಾ ಮಹೇಶ್ ಎಚ್ಚರಿಕೆ

: ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ. ನಿಮಗೆ ಇದು ನೆನಪಿನಲ್ಲಿ ಇರಲಿ. ಈ ಲೋಕಸಭೆ ಚುನಾವಣೆಯಿಂದಲೇ ...
ಸಾ.ರಾ ಮಹೇಶ್
ಸಾ.ರಾ ಮಹೇಶ್
Updated on: 
ಮೈಸೂರು: ಮಂಡ್ಯದಲ್ಲಿ ನಮ್ಮನ್ನ ಒಮ್ಮೆ ತಬ್ಬಿಕೊಂಡರೆ ಮೈಸೂರಿನಲ್ಲಿ ನಿಮ್ಮನ್ನ 5 ಬಾರಿ ತಬ್ಬಿಕೊಳ್ಳುತ್ತೇವೆ. ನಿಮಗೆ ಇದು ನೆನಪಿನಲ್ಲಿ ಇರಲಿ. ಈ ಲೋಕಸಭೆ ಚುನಾವಣೆಯಿಂದಲೇ ಇದು ಪ್ರಾರಂಭವಾಗಬೇಕು.ನಾವು ಮೈಸೂರಿನಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡದೇ ಸೇವೆ ಮಾಡಿದ್ದೇವೆ. ಆದ್ದರಿಂದ ಮೈತ್ರಿ ಧರ್ಮ ಪಾಲಿಸಿ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯರ್ತರು ಕೆಲಸ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ. ಸಾ.ರಾ ಮಹೇಶ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಸುಮಲತಾ ಅಂಬರೀಷ್ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು,ಕೈ ಕಾರ್ಯಕರ್ತರು ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವುದು, ಜೆಡಿಎಸ್ ನಾಯಕರಿಗೆ ದಿಗಿಲುಂಟುಮಾಡಿದೆ. ಈ ಹಿನ್ನೆಲೆಯಲ್ಲಿ  ಪ್ರವಾಸೋದ್ಯಮ ಸಚಿವ  ಸಾ.ರಾ ಮಹೇಶ್ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮೈತ್ರಿ ಧರ್ಮದಂತೆ ಮಂಡ್ಯ ಜೆಡಿಎಸ್ ಗೆ ಮೈಸೂರು ಕಾಂಗ್ರೆಸ್ ಗೆ ಎಂದು ನಿರ್ಧರಿಸಲಾಗಿದೆ, ಈ ಹಿನ್ನೆಲೆಯಲ್ಲಿ  ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೇಗೆೆ ನಮ್ಮ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೋ ಹಾಗೆಯೇ ನಾವು ಮೈಸೂರಿನಲ್ಲಿ ಕೆಲಸ ಮಾಡುತ್ತೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮಹೇಶ್ ವಾರ್ನಿಂಗ್ ಮಾಡಿದ್ದಾರೆ.,
ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ಟ್ಕಿಕ್ಟ್ ಆಗಿ ವಾರ್ನಿಂಗ್ ನೀಡಬೇಕು, ಸುಮಲತಾ ಅವರ ಪರವಾಗಿ ಪ್ರಚಾರದಲ್ಲಿ ಭಾಗವಹಿಸಬಾರದೆಂದು ಸೂಚನೆ ನೀಡಬೇಕು ಎಂದು ಹೇಳಿದ್ದಾರೆ. ಮೈತ್ರಿ ಧರ್ಮದ ಪ್ರಕಾರ ನಮ್ಮ ಅಭ್ಯರ್ಥಿಗೆ ವಂಚಿಸಬಾರದು, ನೀವು ನಮಗೆ ಎಷ್ಟು ಪ್ರೀತಿ ಕೊಡುತ್ತೀರೋ ನಾವು ಅದಕ್ಕೆ ದುಪ್ಪಟ್ಟು ಕೊಡುತ್ತೀವಿ ಎಂದು ಹೇಳಿದ್ದಾರೆ. 
ಇನ್ನೂ ಸುಮಲತಾ ಅವರ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ  ಸಾ,ರಾ ಮಹೇಶ್ ನಿಖಿಲ್ ಮತ್ತು ಅಭಿಷೇಕ್ ಇಬ್ಬರು ಉತ್ತಮ ಸ್ನೇಹಿತರು, ನಿಖಿಲ್ ವಿರುದ್ಧ ಸುಮಲತಾ ಸ್ಪರ್ಧಿಸಬಾರದಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com