ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ ಸಿ ಗೌರಿಶಂಕರ್ ತುಮಕೂರಿನಿಂದ ದೇವೇಗೌಡರು ಸ್ಪರ್ಧಿಸಲಿದ್ದಾರೆ ಎಂಬ ಖುಷಿಯಲ್ಲಿ ನಿನ್ನೆ ತಮ್ಮ ಬೆಂಬಲಿಗರಿಗೆ ಪಾರ್ಟಿ ಆಯೋಜಿಸಿದ್ದರು. ಮಾಜಿ ಸಚಿವ ಬಿ ಸತ್ಯನಾರಾಯಣ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ, ತುಮಕೂರು ಕ್ಷೇತ್ರವನ್ನು ದೇವೇಗೌಡರು ಆಯ್ಕೆ ಮಾಡಿಕೊಳ್ಳಬೇಕೆಂದು ತಾವು ಬಯಸುತ್ತಿದ್ದೇವೆ. ಇಲ್ಲಿ ನಿಂತರೆ ಎಲ್ಲಾ ವರ್ಗದ ಜನರ ಬೆಂಬಲ ಅವರಿಗೆ ಸಿಗಲಿದೆ ಎಂದರು.