ಮೋದಿ ನೇಣಿಗೇರಲು ಸಿದ್ಧವಾದರೆ ರಸ್ತೆ ಸಿದ್ಧಪಡಿಸಿಕೊಡುತ್ತೇವೆ- ಪ್ರಿಯಾಂಕ್ ಖರ್ಗೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇಣಿಗೇರಲು ಸಿದ್ಧವಾದರೆ ಅದಕ್ಕೆ ರಸ್ತೆ ಸಿದ್ಧಪಡಿಸಿಕೊಡುತ್ತೇವೆ ಎಂದು ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿವಾದ ಸೃಷ್ಟಿಸಿದ್ದಾರೆ.
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Updated on

ಚಿಂಚೋಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇಣಿಗೇರಲು ಸಿದ್ಧವಾದರೆ ಅದಕ್ಕೆ ರಸ್ತೆ ಸಿದ್ಧಪಡಿಸಿಕೊಡುತ್ತೇವೆ ಎಂದು ಹೇಳುವ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ವಿವಾದ ಸೃಷ್ಟಿಸಿದ್ದಾರೆ.

ಕಲಬುರಗಿ ಜಿಲ್ಲೆ  ಚಿಂಚೋಳಿಯ ಶಾದಿಪುರದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನೋಟು ರದ್ಧತಿಯಿಂದ ಎದುರಾಗಿದ್ದ ತೊಂದರೆ 50 ದಿನಗಳಲ್ಲಿ ಸರಿಯಾಗದಿದ್ದರೆ ನಡು ರಸ್ತೆಯಲ್ಲಿ ನೇಣು ಹಾಕಿ ಅಂತ ಮೋದಿ ಹೇಳಿದ್ದರು. ಈಗಲೂ ಜನರ ಸಮಸ್ಯೆ ಹಾಗೆಯೇ ಇದೆ. ಆದ್ದರಿಂದ ನಾವು ರಸ್ತೆ ಮಾಡಿಕೊಡಲು ರೆಡಿ ಇದ್ದೀವಿ. ನೇಣಿಗೇರಲು ಮೋದಿ ಬರುತ್ತಾರೆಯೇ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಕ್ಷಮೆಗೆ ಆಗ್ರಹಿಸುವ ಮುನ್ನ ಮೋದಿ ಸೇರಿ ಬಿಜೆಪಿ ನಾಯಕರು ಕ್ಷಮೆ ಕೇಳಲಿ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಬಗ್ಗೆ ನಿತ್ಯ ಕೀಳಾಗಿ ನಿಂದಿಸುವವರು ಯಾರು ಎಂದು ಪ್ರಿಯಾಂಕ್‌ ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ಕೇಸ್ ಹಾಕುವುದಾದರೆ ದಯವಿಟ್ಟು ಮೊದಲು ಹಾಕಿ ಎಂದು ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com