ಇಲ್ಲಿವರೆಗೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದ ಯಡಿಯೂರಪ್ಪ ಈಗ ಸತ್ಯ ಹೇಳಿದ್ದಾರೆ: ಎಂ.ಬಿ.ಪಾಟೀಲ್​

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸತ್ಯ ಬಯಲಾಗಿದೆ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.
ಎಂ ಬಿ ಪಾಟೀಲ್
ಎಂ ಬಿ ಪಾಟೀಲ್

ಸಿಎಂ ಯಡಿಯೂರಪ್ಪ ಆರಾಧ್ಯ ದೈವದ ಮುಂದೆ ಪ್ರಮಾಣ ಮಾಡಲಿ: ಉಗ್ರಪ್ಪ ಸವಾಲು

ವಿಜಯಪುರ:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸತ್ಯ ಬಯಲಾಗಿದೆ ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ.

ವಿಜಯಪುರದ ಅರಕೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಿಯೋ ಲೀಕ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಆಡಿಯೋದಲ್ಲಿ ಯಡಿಯೂರಪ್ಪ ಸತ್ಯ ಹೇಳಿದ್ದಾರೆ. ಈವರೆಗೆ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿಯವರು ಸೇರಿ ಆಪರೇಶನ್ ಕಮಲ ಮಾಡಿದ್ದು, ರಹಸ್ಯವಾಗಿತ್ತು. ಈಗ ಆಡಿಯೋ ಲೀಕ್ ಆದ ಮೇಲೆ ಅಧಿಕೃತಗೊಂಡಿದೆ ಎಂದು ಆರೋಪಿಸಿದರು.

ಇಲ್ಲಿಯವರೆಗೆ ಬಿಜೆಪಿಯವರು ಆತ್ಮ ವಂಚ‌ನೆ ಮಾಡಿಕೊಳ್ಳುತ್ತಿದ್ದರು‌. ಸದ್ಯ ಬಣ್ಣ ಬಯಲಾಗಿದೆ. ಹೈಕಮಾಂಡ್ ನಿಂದ ಮುಖ್ಯಮಂತ್ರಿಗೆ ಬೆದರಿಕೆ ಬಂದ ಮೇಲೆ ಮತ್ತೆ ಉಲ್ಟಾ ಹೊಡೆದಿದ್ದಾರೆ. ಇಲ್ಲಿಯವರೆಗೆ ಜನರಿಗೆ ಅನಧಿಕೃವಾಗಿ ಗೊತ್ತಿದ್ದದ್ದನ್ನು ಈಗ ಯಡಿಯೂರಪ್ಪ ಅಧಿಕೃತಗೊಳಿಸಿದ್ದಾರೆ ಎಂದರು.

ಇನ್ನು ಈ ಆಡಿಯೋ ಸಿದ್ದರಾಮಯ್ಯನವರ ಸೃಷ್ಟಿ ಎಂಬುದು ಚಿಲ್ಲರೆ ಆರೋಪ. ಆ ಸ್ಥಳದಲ್ಲಿ ಬಿಜೆಪಿ ಸಭೆ ನಡೆಸಿದೆ, ಮೂಲ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು., ಸ್ಥಳೀಯ ಕಾರ್ಯಕರ್ತರು ಸೇರಿ ಇದನ್ನು ಮಾಡಿದ್ದಾರೆ ಎಂದು ಪಾಟೀಲ್ ಹೇಳಿದರು

ಸಿಎಂ ಯಡಿಯೂರಪ್ಪ ಆರಾಧ್ಯ ದೈವದ ಮುಂದೆ ಪ್ರಮಾಣ ಮಾಡಲಿ: ಉಗ್ರಪ್ಪ ಸವಾಲು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡು ತಲೆಯ ಹಾವಿದ್ದಂತೆ. ಸುಪ್ರೀಂಕೋರ್ಟ್ ಅನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಡಿಯೂರು ಸಿದ್ದಲಿಂಗೇಶ್ವರ ಯಡಿಯೂರಪ್ಪನವರ ಆರಾಧ್ಯ ದೈವವಾಗಿದ್ದು, ದೈವದ ಮುಂದೆ ಆಡಿಯೋ ತಮ್ಮದಲ್ಲ ಎಂದು ಪ್ರಮಾಣ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.

ಯಡಿಯೂರಪ್ಪ ಆಡಿಯೋ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ. ಆಡಿಯೋ ವಿಚಾರದ ಬಗ್ಗೆ ಇವರು ಹತಾಶರಾಗಿ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ಕೊಡುವುದನ್ನು ನೋಡಿದರೆ ಬುದ್ಧಿ ಕಳೆದುಕೊಂಡಂತಿದೆ. ಯಡಿಯೂರಪ್ಪರಿಂದ ಹಿಡಿದು ಬಿಜೆಪಿ ಎಲ್ಲಾ ನಾಯಕರಿಗೂ ಸಾಮೂಹಿಕ ಸನ್ನಿ ಹಿಡಿದಿದ್ದು, ಕಾಂಗ್ರೆಸ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಆಪರೇಷನ್ ಕಮಲದ ಕುರಿತು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆ ಎನ್ನಲಾದ ಆಡಿಯೋದ ಬಗ್ಗೆ ಬಿಜೆಪಿಯ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಅವರಿಗೆ ನಿಮ್ಹಾನ್ಸ್ ವೈದ್ಯರಿಂದ ಮಾನಸಿಕ ರೋಗಕ್ಕೆ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವ್ಯಂಗ್ಯವಾಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com