ರಕ್ಕಸ, ಜಾತಿ ರಾಜಕೀಯ ಉರುಳಿಸಲು ನಮ್ಮಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಬಳಸಿದ್ದೆವು: ಎ.ಹೆಚ್.ವಿಶ್ವನಾಥ್

ರಕ್ಕಸ ಆಡಳಿತ ಹಾಗೂ ಜಾತಿ ರಾಜಕೀಯವನ್ನು ಉರುಳಿಸಲು ನಮ್ಮಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಬಳಸಿದ್ದೆವು ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಅವರು ಹೇಳಿದ್ದಾರೆ. 
ಎ.ಹೆಚ್.ವಿಶ್ವನಾಥ್
ಎ.ಹೆಚ್.ವಿಶ್ವನಾಥ್
Updated on

ಮೈಸೂರು: ರಕ್ಕಸ ಆಡಳಿತ ಹಾಗೂ ಜಾತಿ ರಾಜಕೀಯವನ್ನು ಉರುಳಿಸಲು ನಮ್ಮಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಬಳಸಿದ್ದೆವು ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎ.ಹೆಚ್.ವಿಶ್ವನಾಥ್ ಅವರು ಹೇಳಿದ್ದಾರೆ. 

ಅಧಿಕಾರವನ್ನು ಕಿತ್ತುಕೊಳ್ಳುವ ಉದ್ದೇಶ ನಮಗಿರಲಿಲ್ಲ. ಆದರೆ, ರಾಕ್ಷಸ ಆಡಳಿತ ಹಾಗೂ ಜಾತಿ ರಾಜಕೀಯಕ್ಕೆ ಅಂತ್ಯ ಹಾಡಬೇಕಿತ್ತು. ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ನಮಗೆ ಬೆಂಬಲ ನೀಡಿದ್ದರು. ಇದರಂತೆ ಸರ್ಕಾರ ಉರುಳಿಸಲು ನಮ್ಮಲ್ಲಿದ್ದ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸಿದ್ದೆವು ಎಂದು ಹೇಳಿದ್ದಾರೆ. 

ಶ್ರೀನಿವಾಸ್ ಪ್ರಸಾದ್ ಅವರ ಮೂಲಕ ಯಡಿಯೂರಪ್ಪ ಅವರು ನಮಗೆ ಆಹ್ವಾನ ನೀಡಿದ್ದರು. ಇದಾದ ಬಳಿಕ ನಾವು ಈ ಬಗ್ಗೆ ಗಂಭೀರ ಚರ್ಚೆಗಳನ್ನು ನಡೆಸಿದ್ದೆವು ಎಂದು ತಿಳಿಸಿದ್ದಾರೆ. 

3-4 ಶಾಸಕರು ಬಂದಿದ್ದರು. ಆದರೆ, ಅದರಿಂದ ಏನೂ ಸಾಧ್ಯವಾಗಲಿಲ್ಲ. ಜೆಡಿಎಸ್ ತೊರೆದು ಬರುವಂತೆ ತಿಳಿಸಿದ್ದೆವು. ಮತ್ತಷ್ಟು ಶಾಸಕರನ್ನು ಕರೆತಂದು ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ತಿಳಿಸಿದ್ದೆ ಎಂದು ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಾರೆ. 

ರಾಜೀನಾಮೆ ನೀಡುವಂತೆ ಬೇರಾವುದೇ ನಾಯಕರು ಹೇಳಿದ್ದರೂ ನಾನು ಕೇಳುತ್ತಿರಲಿಲ್ಲ. ಆದರೆ, ಶ್ರೀನಿವಾಸ್ ಪ್ರಸಾದ್ ಅವರು ಹೇಳಿದ್ದಕ್ಕೆ ನಾನು ಕೇಳಿದ್ದೆ. ರಾಜೀನಾಮೆ ನೀಡಲು ಮೊದಲನೇ ಭೇಟಿಯಲ್ಲೇ ನಿರ್ಧರಿಸಿದ್ದೆ. ಶ್ರೀನಿವಾಸ್ ಪ್ರಸಾದ್ ಅವರಿಂದ ನಾನು ವಿಧಾನಸಭೆ ಹಾಗೂ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಯಾವುದೇ ರಾಜಕೀಯ ವ್ಯಾಖ್ಯಾನಕಾರ ಅಥವಾ ಬರಹಗಾರರು ಕಳೆದ 3 ತಿಂಗಳ ರಾಜಕೀಯ ಬೆಳವಣಿಗೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಶಾಸಕರು ಪಕ್ಷಾಂತರ ಮಾಡುವವರಲ್ಲ. ಇದು ಕೇವಲ ರಾಜಕೀಯ ಧ್ರುವೀಕರಣವಷ್ಟೇ. ಜೆಡಿಎಸ್ ಕಚೇರಿ ಕುಟುಂಬದ ಹೆಸರಿನಲ್ಲಿದೆ. ಉದ್ಯಮಿಯೊಬ್ಬರು ಮೈಸೂರಿನಲ್ಲಿ ಕಚೇರಿಯೊಂದನ್ನು ನಿರ್ಮಿಸಿ ಬಿಜೆಪಿಗೆ ನೀಡಿದ್ದಾರೆ. ಇಂತಹ ವಾತಾವರಣವನ್ನು ಬಿಜೆಪಿ ನಿರ್ಮಾಣ ಮಾಡಬೇಕು. 

ಪ್ರಧಾನಿ ಮೋದಿ ಹಾಗೂ ದೇವರಾಜ್ ಅರಸು ಅವರು ಇಬ್ಬರು ಖ್ಯಾತಿ ಪಡೆದ ನಾಯಕರಾಗಿದ್ದಾರೆ. ದೇಶ ಮುನ್ನಡೆಯುತ್ತಿದೆ. ನಾನು ಹಿಂದುಳಿಯಲು ಇಷ್ಟ ಪಡುವುದಿಲ್ಲ. ಬಿಜೆಪಿ ಸೇರ್ಪಡೆ ಕುರಿತು ನಾನು ಎಂದಿಗೂ ಆಲೋಚನೆ ಮಾಡಿರಲಿಲ್ಲ. ಮಾಜಿ ಸಂಸದ ವಿಜಯ್ ಶಂಕರ್ ಹಾಗೂ ನಾನು ಕುರುಬಕ್ಕೆ ಸೇರಿದವರು. ಬಿಜೆಪಿ ಸೇರ್ಪಡೆ ಉತ್ತಮವಾದದ್ದು. ಮತ್ತಷ್ಟು ಶಾಸಕರನ್ನು ಪಕ್ಷಕ್ಕೆ ಕರೆತರಲಾಗುತ್ತದೆ. 
 
ಕಳೆದ ಮೂರು ತಿಂಗಳಿನ ಬೆಳವಣಿಗೆಗಳನ್ನು ಜನತೆ ನೋಡುತ್ತಲೇ ಇದ್ದಾರೆ. ಸೋಮವಾರ ನಾಮಪತ್ರವನ್ನು ಸಲ್ಲಿಸುತ್ತೇನೆಂದು ತಿಳಿಸಿದ್ದಾರೆ. 

ಅಲ್ಲದೆ, ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಇದೇ ವೇಳೆ ವಾಗ್ದಾಳಿ ನಡೆಸಿದ ವಿಶ್ವನಾಥ್ ಅವರು, ಇಬ್ಬರೂ ನಾಯಕರು ದ್ವಿಮುಖ ಧೋರಣೆಯನ್ನು ಹೊಂದಿದ್ದಾರೆ. ಸಿದ್ದರಾಮಯ್ಯ ಅವರು ಅಂದು 7 ಶಾಸಕರನ್ನು ತಮ್ಮ ಹಿಂದೆ ಕರೆದುಕೊಂಡು ಜೆಡಿಎಸ್ ತೊರೆದಿದ್ದರು. ಇದು ಇದು ಪಕ್ಷಾಂತರವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಪಕ್ಷಾಂತರಿಗಳನ್ನು ಸೋಲಿಸುವುದೇ ನನ್ನ ಗುರಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಮುಂದಿನ ಉಪ ಚುನಾವಣೆಯಲ್ಲಿ ಎಲ್ಲಾ 17 ಶಾಸಕರು ಗೆಲುವು ಸಾಧಿಸಲಿದ್ದಾರೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com