'ನಮ್ಮ ತಂದೆ ಪಿಎಂ ಆಗಿದ್ದಾಗ ಕೋಮು ಗಲಭೆ ನಡೆಯಲಿಲ್ಲ, ಸ್ಫೋಟಗಳು ಆಗಿಲ್ಲ, ಈಗ ಏಕೆ?'

ನಮ್ಮ ತಂದೆ ಪ್ರಧಾನ ಮಂತ್ರಿ ಆಗಿದ್ದಾಗ ಯಾಕೆ ಈ ರೀತಿ ಉಗ್ರರು ದೇಶಕ್ಕೆ ನುಸುಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on: 

ಮೈಸೂರು: ನಮ್ಮ ತಂದೆ ಪ್ರಧಾನ ಮಂತ್ರಿ ಆಗಿದ್ದಾಗ ಯಾಕೆ ಈ ರೀತಿ ಉಗ್ರರು ದೇಶಕ್ಕೆ ನುಸುಳಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರಾಜ್ಯಕ್ಕೆ ಉಗ್ರರು ನುಸುಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ತಂದೆ ಪಿಎಂ ಆಗಿದ್ದಾಗ ದೇಶದಲ್ಲಿ ಕೊಮು ಗಲಭೆಗಳು ಯಾಕೆ ನಡೆಯಲಿಲ್ಲ. ಇಡೀ ದೇಶದಲ್ಲಿ ಎಲ್ಲಿಯೂ ಯಾಕೆ ಸ್ಫೋಟಗಳು ಉಂಟಾಗಲಿಲ್ಲ ಎಂದು ಪ್ರಶ್ನಿಸಿದ ಅವರು, ಇದು ಇವತ್ತಿನ ಆಡಳಿತ ವ್ಯವಸ್ಥೆಯ ಸ್ಥಿತಿ ಎಂದು ಕಿಡಿಕಾರಿದ್ದಾರೆ.

ಆಡಳಿತ ನಡೆಸುವವರ ಮನಸ್ಥಿತಿಗಳು ಸರಿಯಿಲ್ಲದಾಗ ಈ ರೀತಿಯ ಭಯ ಸೃಷ್ಟಿಯಾಗುತ್ತದೆ. ಚೀನಾ, ಪಾಕಿಸ್ತಾನಕ್ಕಿಂತಲೂ ನಮ್ಮ ದೇಶದಲ್ಲಿ ಹೆಚ್ಚಿನ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಈ ಬಗ್ಗೆ ಮೊದಲು ಗಮನ ಹರಿಸಲಿ. ಆಮೇಲೆ ಪ್ರಧಾನಿಗಳು ಕಾಂಗ್ರೆಸ್ 370ಯನ್ನ ಮತ್ತೆ ಜಾರಿ ಮಾಡಲಿ ಅನ್ನೋ ಸವಾಲು ಹಾಕಲಿ ಎಂದು ಕಿಡಿಕಾರಿದರು.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com