17 ಕ್ಷೇತ್ರಗಳ ಉಪಚುನಾವಣೆ: ಹುಣಸೂರಿನಿಂದ ಜೆಡಿಸ್ ಅಭ್ಯರ್ಥಿಯಾಗಿ ಜಿಟಿಡಿ ಪುತ್ರ!

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪತನವಾಗುವವರೆಗೂ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡ ಸ್ವಪಕ್ಷಕ್ಕೆ ಟಾಂಗ್ ನೀಡುತ್ತಿದ್ದರು.
ಜಿ.ಟಿ ದೇವೇಗೌಡ
ಜಿ.ಟಿ ದೇವೇಗೌಡ

ಮೈಸೂರು: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪತನವಾಗುವವರೆಗೂ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡ ಸ್ವಪಕ್ಷಕ್ಕೆ ಟಾಂಗ್ ನೀಡುತ್ತಿದ್ದರು.

ಆದರೆ ಇತ್ತೀಚಿನ ಬೆಳವಣಿಗೆಯೊಂದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ. ಒಂದೆಡೆ ಜಿ.ಟಿ ದೇವೇಗೌಡ ಜೆಡಿಎಸ್ ಪಕ್ಷ ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಬೈಯ್ದಾಡುತ್ತಾ ತಿರುಗುತ್ತಿದ್ದಾರೆ,  ಇದೇ ವೇಳೆ ಹುಣಸೂರು ಉಪ ಚುನಾವಣೆಗೆ ಜೆಡಿಎಸ್ ನಿಂದ ಜಿಟಿಡಿ ಪುತ್ರ ಹರೀಶ್ ಗೌಡನನ್ನು ಕಣಕ್ಕಿಳಿಸಲು ಜೆಡಿಎಸ್ ಚಿಂತಿಸಿದೆ.

ಸೇಫ್ ಗೇಮ್ ಆಡುತ್ತಿರುವ ಜೆಡಿಎಸ್ ಮುಖಂಡರು ಹರೀಶ್ ಗೌಡ ಹೆಸರನ್ನು ಮುಂದಿಟ್ಟಿದ್ದಾರೆ, ಒಂದು ವೇಳೆ ಹರೀಶ್ ಸ್ಪರ್ಧಿಸಲು ನಿರಾಕರಿಸಿದರೇ ಮುಂದಿನ ನಿರ್ಧಾರ ಕೈಗೊಳ್ಳಲು ಚಿಂತಿಸಿದೆ. ಹುಣಸೂರಿನಲ್ಲಿ ಜೆಡಿಎಸ್ ಭದ್ರವಾಗಿ ತಳವೂರಿದೆ,  ಮಾಜಿ ಸಚಿವ ಸಾ.ರಾ ಮಹೇಶ್ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರ ಸ್ವಾಮಿ,ಈ ವಿಷಯವನ್ನು ಜಿಟಿ ದೇವೇಗೌಡರ ಹತ್ತಿರ ಶೀಘ್ರವೇ ಚರ್ಚಿಸಲಿದ್ದಾರೆ, ಸೆಪ್ಟಂಬರ್ 21 ರಂದು  ನಡೆಯುವ ಸಭೆಯಲ್ಲಿ ಮಹೇಶ್ ಮತ್ತು ಜಿಟಿಡಿ ಭಾಗವಹಿಸಲಿದ್ದಾರೆ, 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com