ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್: ಆಯ್ಕೆಗೆ ಮಣೆ ಹಾಕಿದ್ದು ಆರ್ ಎಸ್ ಎಸ್!

ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುನ್ನೆಡಸಲು ಯಡಿಯೂರಪ್ಪ ಸಾರಥಿಯಾಗಿದ್ದಾರೆ, ಅದರಂತೆ ಬಿಎಸ್ ವಲೈ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ..
ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಬೆಂಗಳೂರು:  ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮುನ್ನೆಡಸಲು ಯಡಿಯೂರಪ್ಪ ಸಾರಥಿಯಾಗಿದ್ದಾರೆ, ಅದರಂತೆ ಬಿಎಸ್ ವಲೈ ಮುಖ್ಯಮಂತ್ರಿಯಾದ ಹಿನ್ನೆಲೆಯಲ್ಲಿ ತೆರವಾಗಿದ್ದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಮೂರು ಬಾರಿ ರಾಜ್ಯದಿಂದ ಸಂಸದರಾಗಿ ಆಯ್ಕೆಯಾಗಿರುವ ಕಟೀಲ್ ಅವರಿಗೆ ನರೇಂದ್ರ ಮೋದಿ ಸಂಪುಟದಲ್ಲಿ ಮಂತ್ರಿಯಾಗುವ ಅವಕಾಶ ಕೈ ತಪ್ಪಿತ್ತು,  ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ನಳಿನ್ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಆರ್ ಎಸ್ ಎಸ್ ಜೊತೆಗೆ ಸುದೀರ್ಘ ಕಾಲದಿಂದ ಗುರುತಿಸಿಕೊಂಡಿದ್ದ  ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಿಸಲು ಆರ್ ಎಸ್ ಎಸ್ ಬೆಂಬಲವೇ ಕಾರಣವಾಗಿದೆ. 

ಭೂಪಾಲ್ ಸಂಸದೆ ಪ್ರಜ್ಞ್ಯಾ ಠಾಕೂರ್ ನಾಥೂರಾಮ್ ಗೂಡ್ಸೆ ಬಗ್ಗೆ ನೀಡಿದ್ದ ಹೇಳಿಕೆಯನ್ನು ಇತ್ತೀಚೆಗೆ ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿ ಟ್ವೀಟ್ ಮಾಡಿದ್ದರು. ಇದಕ್ಕಾಗಿ ಪಕ್ಷದ ಶಿಸ್ತು ಸಮಿತಿಯ ಕೆಂಗಣ್ಣಿಗೆ ಗುರಿಯಾಗಿದ್ದರು.ಅದಾದ ತಿಂಗಳ ಬಳಿಕೆ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.,

ಪ್ರಜ್ಞಾ ಠಾಕೂರ್ ಹೇಳಿಕೆಯನ್ನು ಬೆಂಬಲಿಸಿದ್ದ ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಹೆಗಡೆ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಸ್ವತಃ ಅಮಿತ್ ಶಾ ಆದೇಶಿಸಿದ್ದರು. ನಂತರ ಕಟೀಲ್ ಕ್ಷಮೆ ಕೋರಿದ್ದರು. ತಿಂಗಳು ಕಳೆಯುವುರೊಳಗೆ ಎಲ್ಲವೂ ಮರೆತು ಹೋಗಿದೆ, ಆಂತರಿಕ ವಿಚಾರಣೆ ಏನಾಯಿತೆಂದು ಬಿಜೆಪಿ ಮಾತ್ರ ಬಹಿರಂಗ ಪಡಿಸಿಲ್ಲ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಯಡಿಯೂರಪ್ಪ ಅವರ ಬದ್ಧ ವೈರಿ ಎಂಬುದು ಎಲ್ಲರಿಗೂ ತಿಳಿದಿರುವ ಬಹಿರಂಗ ಸತ್ಯವಾಗಿದೆ, ಕಟೀಲ್ ಸಂತೋಷ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಆರ್ ಎಸ್ ಎಸ್ ಶಿಫಾರಸ್ಸಿನಿಂದ ರಾಜ್ಯಾಧ್ಯಕ್ಷ ಪಟ್ಟ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಸರ್ಕಾರವನ್ನು ಗಮನದಲ್ಲಿರಿಸಿಕೊಂಡು ಈ ನೇಮಕ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರಾದ ಶೋಭ ಕರಂದ್ಲಾಜೆ ಮತ್ತು ಅರವಿಂದ ಲಿಂಬಾವಳಿ ಹೆಸರು ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬಂದಿತ್ತು. ಆದರೆ ಆರ್ ಎಸ್ ಎಸ್ ಅಭಿಪ್ರಾಯಕ್ಕೆ ಬಿಜೆಪಿ ಹೆಚ್ಚಿನ ಆದ್ಯತೆ ನೀಡುವುದರಿಂದ ಕಟೀಲ್ ಗೆ ಮಣೆ ಹಾಕಲಾಗಿದೆ. 2018ರ ಆರ್ ಎಸ್ ಎಸ್ ಬೈಠಕ್ ನಲ್ಲಿ ಕಟೀಲ್ ಹೆಸರನ್ನು ಪ್ರಸ್ತಾಪಿಸಿ ಚರ್ಚಿಸಲಾಗಿತ್ತು ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com