ಸಿಎಂ  ಬಿ.ಎಸ್ ಯಡಿಯೂರಪ್ಪ ಬ್ರಿಗೇಡ್ ನ ಫ್ರೆಶ್ ಸಚಿವರಿವರು! 

ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ,  ಸಂಪುಟಕ್ಕೆ ಸೇರ್ಪಡೆಯಾದ 17 ಶಾಸಕರಲ್ಲಿ ಸುಮಾರು 7 ಶಾಸಕರು ಲಿಂಗಾಯತರೇ ಆಗಿದ್ದಾರೆ. ಅದರಲ್ಲಿ ಮೂವರು ಶಾಸಕರು...
ಯಡಿಯೂರಪ್ಪ ಸಂಪುಟದ ಹೊಸ ಮುಖಗಳು
ಯಡಿಯೂರಪ್ಪ ಸಂಪುಟದ ಹೊಸ ಮುಖಗಳು

ಬೆಂಗಳೂರು: ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ,  ಸಂಪುಟಕ್ಕೆ ಸೇರ್ಪಡೆಯಾದ 17 ಶಾಸಕರಲ್ಲಿ ಸುಮಾರು 7 ಶಾಸಕರು ಲಿಂಗಾಯತರೇ ಆಗಿದ್ದಾರೆ. ಅದರಲ್ಲಿ ಮೂವರು ಶಾಸಕರು ಮೊದಲನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಿದ್ದಾರೆ.

ಅಶ್ವತ್ಥ ನಾರಾಯಣ- ಮಲ್ಲೇಶ್ವರಂ

ಮೂರು ಭಾರಿ ಶಾಸಕರಾಗಿದ್ದ ಡಾ. ಅಶ್ವತ್ಥ ನಾರಾಯಣ ಮಂಗಳವಾರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೂವಿನ ಗುಚ್ಚ ಮತ್ತು ಉಡುಗೊರೆ ಕೊಡುವ ಬದಲು ಗಿಡ ನೆಡಿ, ಅದುವೇ ನನಗೆ ಮತ್ತು ಪ್ರಕೃತಿ ಮಾತೆಗೆ ಉತ್ತಮ ಉಡುಗೊರೆ ಎಂದು ಹೇಳುತ್ತಾರೆ.

ಮಲ್ಲೇಶ್ವರಂ ನಲ್ಲಿ ಸದಾ ಜನರ ಕೈಗೆ ಸಿಗುವ ಶಾಸಕ ಎಂದು ಪ್ರಸಿದ್ದರಾಗಿದ್ದಾರೆ,. ಮೂರು ಬಾರಿ ಶಾಸಕರಾಗಿದ್ದರೂ ಒಮ್ಮೆಯೂ ಸಚಿವ ಸ್ಥಾನ ಅಲಂಕರಿಸದ ಬೆಂಗಳೂರಿನ ಬಿಜೆಪಿಯ ಏಕೈಕ ಶಾಸಕ ಅಶ್ವತ್ಥ ನಾರಾಯಣ  ಅವರು, ಹಲವು ಜನಪರ  ಯೋಜನಗಳನ್ನು ಕೈಗೊಂಡಿದ್ದಾರೆ.

ಬೀದಿ ದೀಪ ಸಮಸ್ಯೆ, ಕಸದ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ,ಬೆಂಗಳೂರು ವಿವಿ ಸೆನೆಟ್ ಸಿಂಡಿಕೇಟ್  ಆಗಿದ್ದ ಅಶ್ವತ್ಥ್ ನಾರಾಯಣ, ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಬ್ಬಂದಿ ಸಂಘದ ಸದಸ್ಯರೂ ಕೂಡ ಆಗಿದ್ದರ. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅಶ್ವತ್ಱ ನಾರಾಯಣ ಮಂಗಳೂರಿನ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದರು. 

 ಪ್ರಭು ಚೌಹಾಣ್- ಬೀದರ್

ಬೀದರ್ ಜಿಲ್ಲೆ ಔರಾದ್ ತಾಲೂಕಿನ  ಬೊಂತಿ ತಾಂಡ್ಯಾದ 50 ವರ್ಷದ ಪ್ರಭು ಚೌಹಾಣ್ ಮುಂಬಯಿಯಲ್ಲಿ ಸ್ಕ್ರಾಪ್ ಬ್ಯುಸಿನೆಸ್ ಮಾಡಿಕೊಂಡಿದ್ದವರು,. ಮಹಾರಾಷ್ಟರದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಚೌಹಾಣ್ ಗೋಪಿನಾಥ್ ಮುಂಡೆ ಅವರ ಆಪ್ತರಾಗಿದ್ದರು.   ಚೌಹಾಣ್ ಅವರನ್ನು ಗೋಪಿನಾಥ್ ಮುಂಡೆ ಔರಾದ್ ಗೆ ಕಳುಹಿಸಿದರು. ಮಾಜಿ ಶಾಸಕ ಗುಂಡಪ್ಪ ವಕೀಲ್ 1999ರಲ್ಲಿ ಚೌಹಾಣ್ ಅವರನ್ನು ಯಡಿಯೂರಪ್ಪಗೆ ಪರಿಚಯಿಸಿದ್ದರು.

ಮೂರು ಬಾರಿ ಶಾಸಕರಾಗಿರುವ ಚೌಹಾಣ್, 2018ರಲ್ಲಿ  ಬೀದರ್ ನಲ್ಲಿ ಬಿಜೆಪಿಯಿಂದ ಗೆದ್ದಿರುವ ಏಕೈಕ ಶಾಸಕರಾಗಿದ್ದಾರೆ. ಸದ್ಯ ಪ್ರವಾಹ ಪೀಡಿತ ರಾಯಚೂರು ಜಿಲ್ಲೆ ಪ್ರವಾಸದಲ್ಲಿರುವ  ಪ್ರಭು ಚೌಹಾಣ್ ತಮಗೆ ಈ ಸ್ಥಾನ ಸಿಗಲು ಜನರೇ ಕಾರಣ ಎಂದು ಹೇಳಿದ್ದಾರೆ.

ಕೋಟಾ ಶ್ರೀನಿವಾಸ್ ಪೂಜಾರಿ
ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಉಡುಪಿ ಜಿಲ್ಲೆಯ ಥಟ್ಟು ಗ್ರಾಮದ ಕೋಟಾದಲ್ಲಿ 1960 ಜನವರಿ 1 ರಂದು ಜನಿಸಿದರು. ಇವರಿಗೆ ಯಾವುದೇ ರಾಜಕೀಯ ಬೆಂಬಲವಿರಲಿಲ್ಲ.ಆದರೆ ನ್ಯಾಯಕ್ಕಾಗಿ ಹೋರಾಡುವ ಅವರ ದಿಟ್ಟತನದಿಂದ, ಸಚಿವರಾಗಿದ್ದಾರೆ, ಬಡತನದ ಕಾರಣದಿಂದಾಗಿ ಬಿಲ್ಲವ ಸಮುದಾಯಕ್ಕೆ ಸೇರಿದ  ಪೂಜಾರಿ ತಮ್ಮ ವಿದ್ಯಾಭ್ಯಾಸವನ್ನು  ಅರ್ಧಕ್ಕೆ ನಿಲ್ಲಿಸಿದರು.

ಆದರೆ ಅವರಿಗೆ ಉತ್ತಮ ಬರವಣಿಗೆ ಇದೆ, ಕನ್ನಡ ದಿನ ಪತ್ರಿಕೆಯೊಂದರಲ್ಲಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ಆಡಳಿತದ ಬಗ್ಗೆ ಕಾಲಂ ಬರೆಯುತ್ತಿದ್ದರು. 1993 ರಲ್ಲಿ ಕೋಟಾ ಗ್ರಾಮ ಪಂಚಾಯಿತಿ ಸದಸ್ಯರಾಗುವ ಮೂಲಕ ಪೂಜಾರಿ ಆವರ ರಾಜಕೀಯ ಪಯಣ ಆರಂಭವಾಯಿತು, 1999 ಮತ್ತು 2004 ರಲ್ಲಿ ಕೆ. ಜಯಪ್ರಕಾಶ್ ಹೆಗಡೆ ವಿರುದ್ಧ  ವಿದಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿದರು, 2015  ರಲ್ಲಿ ಎಂಎಲ್ ಸಿ ಯಾಗಿ ನೇಮಕವಾದ ಕೋಟಾ ಶ್ರೀನಿವಾಸ ಪೂಜಾರಿ 2018ರ ವಿಧಾನಸಭೆ ಚುನಾವಣೆ ನಂತರ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com