'ಅಳು-ನಗುವಿನ ರಂಪಾಟ: ಉಪ ಚುನಾವಣೆ ಕದನದಲ್ಲಿ ಸದ್ದು ಮಾಡಿದ ದನಗಳ ಮಾರಾಟ'

ಪ್ರತಿ ಸಲ ಚುನಾವಣೆಗಳು ಬಂದಾಗ ಆಡಳಿತ ಪಕ್ಷದ ನಾಯಕರು ಹಾಗೂ ವಿಪಕ್ಷ ನಯಕರುಗಳ ಪರಸ್ಪರ ಕೆಸರೆರಚಾಟ ಸಾಮಾನ್ಯ. ಈ ಬಾರಿಯ ಉಪ ಚುನಾವಣೆ ಕೂಡ ಇದಕ್ಕೆ ಹೊರತಾಗಿಲ್ಲ, ಪರಸ್ಪರ ಬೈಯ್ದಾಟ ಸ್ವಲ್ಪ ಅತಿರೇಖ ಎನ್ನುವಷ್ಟು ಮುಟ್ಟಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರತಿ ಸಲ ಚುನಾವಣೆಗಳು ಬಂದಾಗ ಆಡಳಿತ ಪಕ್ಷದ ನಾಯಕರು ಹಾಗೂ ವಿಪಕ್ಷ ನಯಕರುಗಳ ಪರಸ್ಪರ ಕೆಸರೆರಚಾಟ ಸಾಮಾನ್ಯ. ಈ ಬಾರಿಯ ಉಪ ಚುನಾವಣೆ ಕೂಡ ಇದಕ್ಕೆ ಹೊರತಾಗಿಲ್ಲ, ಪರಸ್ಪರ ಬೈಯ್ದಾಟ ಸ್ವಲ್ಪ ಅತಿರೇಖ ಎನ್ನುವಷ್ಟು ಮುಟ್ಟಿದೆ.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ವಯಕ್ತಿಕ ನಿಂದನೆಗಳು ತಾರಕಕ್ಕೇರುತ್ತಿವೆ.   ರೋಡ್ ಶೋ, ಪ್ರಚಾರದ ಸಮಾವೇಶ ನಡೆಸುತ್ತಿರುವ ನಾಯಕರು ಪರಸ್ಪರ ಬೈಯ್ದಾಡುಕೊಳ್ಳುತ್ತಿದ್ದಾರೆ.

ಚಿಂಚೋಳಿಯಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಚುನಾಯಿತ ಪ್ರತಿನಿಧಿಗಳನ್ನು ಕೊಂಡುಕೊಳ್ಳುವ ಮೂಲಕ ಬಿಜೆಪಿ ಕೆಟ್ಟ ಸಂಸ್ಕೃತಿ  ರೂಡಿಗೆ ತರುತ್ತಿದೆ. ಶಾಸಕರು ಸಂತೆಯಲ್ಲಿ ದನಗಳ ರೀತಿ ಮಾರಾಟವಾಗುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮತ್ತೊಂದೆಡೆ ನಗು ಮತ್ತು ಅಳು ಕೂಡ ಚುನಾವಣಾ ಪ್ರಚಾರದ ಸರಕಾಗಿವೆ. ಮಾಜಿ ಸಿಎಂ ಎಚ್ .ಡಿ ಕುಮಾರಸ್ವಾಮಿ ಅವರಿಗೆ ಸಾರ್ವಜನಿಕ ಸಭೆಗಳಲ್ಲಿ ಅಳುವುದು ಮಾತ್ರ ಗೊತ್ತು ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ಸದಾನಂದಗೌಡರು ಸತ್ತ ಮನೆಗೆ ಹೋಗಿ ಹಲ್ಲು ಕಿಸಿಯುತ್ತಾರೆ ಎಂದು ತಿರುಗೇಟು ನೀಡಿದ್ದರು.

ಇನ್ನು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದ ಆರೋಗ್ಯ ಸಚಿವ ಶ್ರೀರಾಮುಲು,  ಎಚ್ ಡಿಕೆ ಕೇವಲ ಐಷಾರಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುವುದು ಬಿಟ್ಟರೆ ಜನರಿಗಾಗಿ ಯಾವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಹೇಳಿಕೆಯನ್ನ ಭ್ರಮೆ ಅಥವಾ ಕನಸು ಎಂದು ತಿಳಿಯಬೇಕೋ ಗೊತ್ತಿಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಎಂಟು ಸ್ಥಾನ ಗೆಲ್ಲದೇ ಹೋದರೆ ನಾನು ರಾಜೀನಾಮೆ ನೀಡುತ್ತೇನೆ. ಒಂದು ಕಾಂಗ್ರೆಸ್​​​ ಹೇಳಿದಂತೆ ಎಂಟು ಸ್ಥಾನ ಗೆಲ್ಲದಿದ್ದರೆ ಸಿದ್ದರಾಮಯ್ಯ ತನ್ನ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲ್​​ ಹಾಕಿದರು.

ಇನ್ನು ಸಿದ್ದರಾಮಯ್ಯ ಓರ್ವ ಸ್ವಾರ್ಥ ರಾಜಕಾರಣಿ. ಯರನ್ನು ಬೆಳೆಯಲು ಬಿಡೋದಿಲ್ಲ. ಎಚ್​​. ವಿಶ್ವನಾಥ್​​ ಸೇರಿದಂತೆ ಹಲವು ಕಾಂಗ್ರೆಸ್ಸಿಗರನ್ನು ಮುಗಿಸಲು ಹೊಟಿದ್ದು ಇದೇ ಸಿದ್ದರಾಮಯ್ಯ. ಇಂತಹ ಸಿದ್ದರಾಮಯ್ಯ ಈಗ ಒಬ್ಬಂಟಿ, ಯಾವುದೇ ಕಾಂಗ್ರೆಸ್​ ನಾಯಕರು ಜೊತೆಗಿಲ್ಲ ಎಂದಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ತನ್ನ ವಿರುದ್ಧ ಕುಟುಕಿದ್ದ ಕೆ.ಎಸ್​​ ಈಶ್ವರಪ್ಪಗೆ ತಿರುಗೇಟು ನೀಡಿದ್ಧಾರೆ. ನನ್ನ ಸಾವನ್ನು ಬಯಸುವವರಿಗೆ ನಾನು ದೀರ್ಘಾಯುಷ್ಯವನ್ನು ಹಾರೈಸುತ್ತೇನೆ. ಕೆ.ಎಸ್​​ ಈಶ್ವರಪ್ಪ ನೂರುಕಾಲ ಬಾಳಲಿ ಎಂದು ಟ್ವೀಟ್​ ಮಾಡಿದ್ಧಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com