ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಂಡ ಕಾಂಗ್ರೆಸ್: ರಿಜ್ವಾನ್ ಅರ್ಷದ್ ವಿಧಾನಸಭೆಗೆ ಪ್ರವೇಶ

ಅತಿ ಹೆಚ್ಚು 20 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದ ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಕ್ಷದ ಅಭ್ಯರ್ಥಿ ವಿಧಾನಸ ಪರಿಷತ್‌ ಸದಸ್ಯರೂ ಆಗಿರುವ ರಿಜ್ವಾನ್ ಅರ್ಷದ್ ಜಯಗಳಿಸಿದ್ದಾರೆ.
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್

ಬೆಂಗಳೂರು : ಅತಿ ಹೆಚ್ಚು 20 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದ ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಪಕ್ಷದ ಅಭ್ಯರ್ಥಿ ವಿಧಾನಸ ಪರಿಷತ್‌ ಸದಸ್ಯರೂ ಆಗಿರುವ ರಿಜ್ವಾನ್ ಅರ್ಷದ್ ಜಯಗಳಿಸಿದ್ದಾರೆ.

ಈ ಬಾರಿ ಶಿವಾಜಿ ನಗರದ ಉಪ ಚುನಾವಣೆ ಬಹಳಷ್ಟು ಕುತೂಹಲ ಹುಟ್ಟಿಸಿತ್ತು. ಅನರ್ಹ ಶಾಸಕ ರೋಶನ್ ಬೇಗ್ ಅವರು ರಿಜ್ವಾನ್ ಅರ್ಷದ್ ಅವರನ್ನು ಸೋಲಿಸುವ ಪಣ ತೊಟ್ಟಿದ್ದರು. ಇದೀಗ ಎಲ್ಲ ಲೆಕ್ಕಾಚಾರ ಮತದಾರ ತಲೆ ಕೆಳಗೆ ಮಾಡಿದ್ದು ರಿಜ್ವಾನ್ ಅರ್ಷದ್ ವಿಜಯ ಸಾಧಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ರಿಜ್ವಾನ್ ಅರ್ಷದ್ ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಪರ ಸ್ಪರ್ಧಿಸಿದ್ದ ಎಮ್.ಸರವಣ 36, 369 ಮತಗಳನ್ನು ಪಡೆದು ಪೈಪೋಟಿ ನೀಡಿದ್ದರು. ರಿಜ್ವಾನ್ 49,890 ಮತಗಳನ್ನು ಪಡೆದಿದ್ದಾರೆ. ಇನ್ನು ಎಸ್.ಡಿ.ಪಿ.ಐ ಪಕ್ಷದಿಂದ ಸ್ಪರ್ಧಿಸಿದ್ದ ಅಬ್ದುಲ್ ಹನ್ನಾನ್ 3,141 ಮತಗಳನ್ನು ಪಡೆದಿದೆ. ಜೆ.ಡಿ.ಎಸ್ ಅಭ್ಯರ್ಥಿ ತನ್ವೀರ್ ಅಹ್ಮದ್ 1098 ಮತಗಳನ್ನು ಪಡೆದಿದ್ದಾರೆ. 

ಎಲ್ಲಾ ಅನರ್ಹ ಶಾಸಕರು ಬಿಜೆಪಿ ಸೇರಿದ್ದರೂ ಶಿವಾಜಿನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಿಲ್ಲ. ಐಎಂಎ ಹಗರಣ ಅವರನ್ನು ಸುತ್ತುವರಿದಿದ್ದರಿಂದ ಬಿಜೆಪಿ ಅವರಿಗೆ ಟಿಕೆಟ್ ನೀಡಿರಲಿಲ್ಲ.ಬದಲಾಗಿ ಎಂ.ಸರವಣ ಅವರಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುವ ಟಾಸ್ಕನ್ನು ರೋಷನ್ ಬೇಗ್‌ ಗೆ ಬಿಜೆಪಿ ನೀಡಿತ್ತು.

ರೋಷನ್ ಬೇಗ್ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಮಾತ್ರವಲ್ಲ ಅವರ ಬೆಂಬಲಿಗ ಬಿಬಿಎಂಪಿ ಸದಸ್ಯರು ಬಿಜೆಪಿ ಸೇರಿ ಪ್ರಚಾರ ನಡೆಸಿದ್ದರು. ಆದರೆ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com